ಬಂಟ್ವಾಳ ಬಿ.ಸಿ.ರೋಡಿನಲ್ಲಿರುವ ನೇತ್ರಾವತಿ ನದಿ ಸೇತುವೆಯಿಂದ ವ್ಯಕ್ತಿಯೋರ್ವ ನದಿಗೆ ಹಾರಿದ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಹಾರಿರಬಹುದು ಎಂದು ಶಂಕಿಸಲಾಗಿದೆ. ಸಮೀಪದ ಪಾಣೆಮಂಗಳೂರು ಸೇತುವೆ ಬಳಿ ಇವರನ್ನು ಸ್ಥಳೀಯ ಈಜುಗಾರರು ಪತ್ತೆಹಚ್ಚಿ ದಡಕ್ಕೆ ತಂದ ವೇಳೆ ಮೃತಪಟ್ಟಿರುವುದು ಗೊತ್ತಾಗಿದೆ. ವಯಸ್ಸು 65ರಿಂದ 70 ವರ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಭಾನುವಾರ ರಾತ್ರಿ ನದಿಗೆ ಒಬ್ಬಂಟಿಯಾಗಿ ಸೇತುವೆ ಬಳಿ ಬಂದಿರುವ ಈ ವ್ಯಕ್ತಿ ನದಿಗೆ ಹಾರಿದರು. ಕೂಡಲೇ ಗೂಡಿನಬಳಿಯ ಈಜುಗಾರರು ಇವರನ್ನು ರಕ್ಷಿಸಲು ಯತ್ನಿಸಿದರೂ ಮೃತಪಟ್ಟಿದ್ದರು ಎನ್ನಲಾಗಿದೆ. ಶವವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬಂಟ್ವಾಳ ನಗರ ಠಾಣೆ ಅಪರಾಧ ವಿಭಾಗ ಎಸ್.ಐ.ಕಲೈಮಾರ್ ತನಿಖೆ ನಡೆಸುತ್ತಿದ್ದಾರೆ.
Be the first to comment on "ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ಸಾವು"