ಬಂಟ್ವಾಳ: ಮರಳು ದರ ಕಡಿಮೆ ಮಾಡಿ ಜನರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಜನಪರ ಮರಳು ನೀತಿ ರೂಪಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ ಬಡವರು ಮನೆ ಅಥವಾ ಇನ್ನಿತರ ಕಟ್ಟಡ ನಿರ್ಮಿಸಲು ದುಬಾರಿ ಮರಳು ಅಡ್ಡಿಯಾಗುತ್ತಿದೆ. ಸರಿಯಾದ ಮರಳು ನೀತಿಯಿಲ್ಲದೆ ಜನ ಸಾಮಾನ್ಯರು ಸಂಕಷ್ಟ ಪಡುವಂತಾಗಿದೆ ಎಂದರು.
ಸಮಿತಿಯ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಪ್ರಮುಖರಾದ ಹಾರೂನ್ ರಶೀದ್, ಲೋಲಾಕ್ಷ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಶರೀಫ್ ಮದ್ವ, ಇಸ್ಮಾಲಿ ಅರಬಿ, ಸಮದ್ ಕೈಕಂಬ, ಮಹಮ್ಮದ್ ನಂದಾವರ, ಆರೀಫ್ ಗೂಡಿನ ಬಳಿ, ಸಾಧಿಕ್ ಗೂಡಿನ ಬಳಿ, ಶ್ರೀನಿವಾಸ ಭಂಡಾರಿ, ಪ್ರೇಮನಾಥ ಕೆ. ಸುರೇಶ್ ಬಂಟ್ವಾಳ್ ಸ್ವಾಗತಿಸಿ, ಉಪಸ್ಥಿತರಿದ್ದರು.
Be the first to comment on "ಸ್ಪಷ್ಟ ಮರಳು ನೀತಿ ರೂಪಿಸಿ: ಸಮಾನ ಮನಸ್ಕ ಸಮನ್ವಯ ಸಂಘಟನೆಗಳ ಮನವಿ"