ಬಂಟ್ವಾಳ: ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ವತಿಯಿಂದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಬಣ್ಣ 2020 ಬಹುಮಾನ ವಿತರಣಾ ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ವೈದ್ಯ ಡಾ. ಗೋಪಾಲಾಚಾರ್ ಆಗಮಿಸಿ ಬಹುಮಾನ ವಿತರಿಸಿದರು. ಪಾಲ್ಗೊಂಡ ನೂರಕ್ಕೂ ಅಧಿಕ ಮಕ್ಕಳು ಪ್ರಮಾಣಪತ್ರ ಮತ್ತು ಬಹುಮಾನ ಪಡೆದು ಸಂಭ್ರಮಪಟ್ಟರು. ಕುಕ್ಕಾಜೆಯ ನ್ಯೂ ಸ್ಟಾಪ್ ಅಂಡ್ ಶಾಪ್ ಸೂಪರ್ ಮಾರ್ಕೇಟಿನ ಮಾಲೀಕ ಎ. ಅಶ್ರಫ್ ಕುಕ್ಕಾಜೆ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿˌ ಶಾಲಾ ಮುಖ್ಯೋಪಾಧ್ಯಾಯ ವಿ. ಶ್ರೀರಾಮಮೂರ್ತಿ ಶುಭಾಶಯ ಕೋರಿದರು.
ಶಿಕ್ಷಕಿಯರಾದ ಶಾಂತಾ, ಗೀತಾˌ ಪ್ರೇಮಲತಾ ಉಪಸ್ಥಿತರಿದ್ದರು. ಕಲಾವಿದ ಶಿಕ್ಷಕ ತಾರಾನಾಥ್ ಕೈರಂಗಳ ಕಾರ್ಯಕ್ರಮ ಸಂಯೋಜಿಸಿದ್ದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…