ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಂಗಳವಾರ ನೆರೆವೇರಿಸಿದರು.
ಪಿಲಿಂಜ ರಸ್ತೆ ಕಾಮಗಾರಿ ೪.೨೫ಲಕ್ಷ, ನೆಟ್ಲ ಕೇನ್ಲ ರಸ್ತೆ ೩.೭೫ಲಕ್ಷ, ನೆಟ್ಲ ಶಾಲಾಬಳಿ ಕುಡಿಯುವ ನೀರಿನ ಟ್ಯಾಂಕ್ ೮.೫ಲಕ್ಷ, ನೆಟ್ಲ ಕಲ್ಲಗುಡ್ಡೆ ರಸ್ತೆ ೪.೫ಲಕ್ಷ, ಪಂಚಾಯತ್ ಅನುದಾನದ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ತಾ.ಪಂ ಸದಸ್ಯರಾದ ಮಹಾಬಲ ಆಳ್ವ, ಆಕ್ರಮ ಸಕ್ರಮ ಸಮಿತಿ ಸದಸ್ಯರಾದ ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ, ಪಂಚಾಯಿತಿ ಸದಸ್ಯರಾದ ಗಿರಿಶ್ ಕುಲಾಲ್, ಗುರುವಪ್ಪ ಗೌಡ, ಸುಚಿತ್ರ ಗಟ್ಟಿ, ಪೂರ್ಣಿಮ ಶ್ರೀಧರ ರಾವ್, ಪ್ರಮುಖರಾದ ಯೋಗಿಶ್ ಗಟ್ಟಿ, ಮುತ್ತುರಾಜ್, ನವೀನ್ ಗಟ್ಟಿ, ಕುಮಾರಸ್ವಾಮಿ, ನವೀನ್ ಶೆಟ್ಟಿ, ಅನಿಶ್ ದೇವಾಡಿಗ, ಅಭಿಷೇಕ್ ಶೆಟ್ಟಿ, ಅಶೋಕ್ ಪಿಲಿಂಜ, ದಯಾನಂದ ಗಟ್ಟಿ, ಸುನೀಲ್ ಗಟ್ಟಿ, ಲೋಕೆಶ್ ಗಟ್ಟಿ, ರಮೇಶ್ ಗೌಡ ಉಪಸ್ಥಿತರಿದ್ದರು.
Be the first to comment on "ನೆಟ್ಲ ಭಾಗದ ಅಭಿವೃದ್ಧಿ ಕಾರ್ಯ: ಶಾಸಕ ರಾಜೇಶ್ ನಾಯ್ಕ್ ಅವರಿಂದ ಉದ್ಘಾಟನೆ"