ಎಸ್.ಎಸ್.ಎಫ್ ಮಂಚಿ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್

ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ಸೆಕ್ಟರ್ ಅಧ್ಯಕ್ಷರಾದ ಝುಬೈರ್ ಸಂಪಿಲ ಅಧ್ಯಕ್ಷತೆಯಲ್ಲಿ ದಅವಾ ಕಾನ್ಫರೆನ್ಸ್ ಸುನ್ನೀ ಮಹಲ್ ಕೈಯ್ಯೂರು, ಮಂಚಿಯಲ್ಲಿ ನಡೆಯಿತು.

ಎಸ್.ಎಸ್.ಎಫ್. ದ.ಕ ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮೀ ದುಆಃ ನಡೆಸಿ. ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಳ್ಳಾಲ ತರಗತಿಯನ್ನು ಮಂಡಿಸಿದರು.

ಲಾಕ್ ಡೌನ್ ಸಮಯದಲ್ಲಿ ಸೆಕ್ಟರ್ ಮಟ್ಟದಲ್ಲಿ ಹಮ್ಮಿಕೊಂಡಂತಹ ಆನ್ಲೈನ್ ತರ್ತೀಲ್ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ಮಟ್ಟದ ಆನ್ ಲೈನ್ ಮ್ಯಾಗಝೀನ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಮಂಚಿ ಸೆಕ್ಟರ್ ಪ್ರತಿಭೆ ಅಹ್ಮದ್ ಫಸೀಹ್ ಮಂಚಿಯವರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಅದೇ ರೀತಿ ಸೆಕ್ಟರ್ ದಅವಾ ವಿಂಗ್ ನೂತನ  ಸಮಿತಿಯನ್ನು ರೂಪೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು. ಮುಖ್ಯ ಅತಿಥಿಗಳಾಗಿ  ಶೈಖುನಾ ಎಣ್ಮೂರು ಉಸ್ತಾದ್,  ಕರೀಂ ಕದ್ಕಾರ್,  ಅಸ್ಲಂ ಸಂಪಿಲ,  ಹಂಝ ಮಂಚಿ, ರಫೀಕ್ ಝುಹ್ರಿ ಮಂಚಿ, ಇಬ್ರಾಹಿಂ ಸುರಿಬೈಲು ಹಾಗೂ ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಉಪಸ್ಥಿತರಿದ್ದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಎಸ್.ಎಸ್.ಎಫ್ ಮಂಚಿ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*