ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ, ದೈಕಿನಕಟ್ಟೆ ಎಂಬಲ್ಲಿರುವ ಭಾರತ್ ಪೆಟ್ರೋಲಿಯಂ ಕಂಪೆನಿಯ ಪೆಟ್ರೋಲ್ ಬಂಕ್ನ ಶಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮೇಜಿನ ಡ್ರಾಯರ್ ನಲ್ಲಿಟ್ಟಿದ್ದ ವ್ಯವಹಾರದ 1,21,344 ರೂ ನಗದನ್ನು ಕಳವು ಮಾಡಿದ್ದಾರೆ.
ಶುಕ್ರವಾರ ಬೆಳಗ್ಗಿನ ಜಾವ 5.30 ರ ವೇಳೆಗೆ ಪೆಟ್ರೋಲ್ ಬಂಕ್ ನ ನೌಕರ ಕೆಲಸಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು,ತಕ್ಷಣ ಬಂಕ್ ನ ಮೆನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕಳ್ಳರು ಪೆಟ್ರೋಲ್ ಬಂಕ್ ನ ಶಟರ್ ನ ಬೀಗ ಮುರಿದು ಒಳಗಡೆ ಗಾಜನ್ನು ಒಡೆದು ಒಳನುಗ್ಗಿ ಮೇಜಿನ ಡ್ರಾಯರ್ ನಲ್ಲಿ ಎರಡು ಬ್ಯಾಗಿನಲ್ಲಿರಿಸಲಾಗಿದ್ದ ಗುರುವಾರ ಇಡೀದಿನ ನಡೆದ ವ್ಯವಹಾರದ ನಗದು ಹಣ 1,21,344 ರೂ.ವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಬಂಕ್ ನ ಮೆನೇಜರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್.ಐ.ಸೌಮ್ಯ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ಪೆಟ್ರೋಲ್ ಬಂಕ್ ಶಟರ್ ಬೀಗ ಮುರಿದು ನಗದು ಕಳವು"