ಬಂಟ್ವಾಳ: 5 ಲಕ್ಷವರೆಗಿನ ಸಿವಿಲ್ ಕಾಮಗಾರಿಗೆ ತುಂಡುಗುತ್ತಿಗೆ ಮುಂದುವರೆಸುವ ಕುರಿತು ಸರ್ಕಾರ ಆದೇಶ ಹೊರಡಿಸಿದ್ದಾಗಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದು, ಈ ಕುರಿತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರವಾಗಿ ಅವರಿಗೆ ಅಭಿನಂದಿಸುವುದಾಗಿ ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್, ತಾಲೂ ಪಂಚಾಯತ್ ,ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಕಾಮಗಾರಿಗಳು ಕೊರೊನಾ ಸಮಸ್ಯೆಯಿಂದ ತುಂಡು ಗುತ್ತಿಗೆ ಮಾಡಲಾಗದೇ ತುಂಡು ಗುತ್ತಿಗೆ ಅವಧಿ ಮೀರಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸರ್ಕಾರದ ಮಟ್ಟದಲ್ಲಿ ಇತರ ಸಚಿವರು, ಅಧಿಕಾರಿಗಳಲ್ಲಿ ಮಾಡಿಸಿಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಕೈಗೊಳ್ಳುವ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ.5 ಲಕ್ಷ ವರೆಗಿನ ಕಾಮಗಾರಿಗಳನ್ನು ನೋಂದಾಯಿತ ಗುತ್ತಿಗೆದಾರರಿಂದ ತುಂಡು ಗುತ್ತಿಗೆ ಮೂಲಕ ಅನುಷ್ಠಾನ ಮಾಡುವ ಬಗ್ಗೆ ಸರ್ಕಾರದ ಅದೇಶ ಹೊರಡಿಸಲು ಪ್ರಯತ್ನ ಮಾಡಿದವರಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮುಂಚೂಣಿಯ ಪಾತ್ರ ವಹಿಸಿದ್ದಾರೆ ಎಂದವರು ತಿಳಿಸಿದ್ದಾರೆ.
Be the first to comment on "5 ಲಕ್ಷವರೆಗಿನ ಸಿವಿಲ್ ಕಾಮಗಾರಿಗೆ ತುಂಡುಗುತ್ತಿಗೆ ಮುಂದುವರೆಸುವ ಕುರಿತು ಸರ್ಕಾರ ಆದೇಶ: ಶಾಸಕ ರಾಜೇಶ್ ನಾಯ್ಕ್"