ಜಾಹೀರಾತು
ಬಂಟ್ವಾಳ: ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಗ್ರಾಮದ ಮಾರಿಬೆಟ್ಟು ನಿವಾಸಿ, ಹಿರಿಯ ನಾಗಸ್ವರ ವಾದಕ ಚೆನ್ನಪ್ಪ ಸಪಲ್ಯ (72) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೖತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ನಾಗಸ್ವರ ಮತ್ತು ಕ್ಲಾರ್ನೆಟ್ ವಾದಕರಾಗಿ ಗುರುತಿಸಿಕೊಂಡಿದ್ದ ಇವರು ಸರಪಾಡಿ ಶ್ರೀ ಶರಭೇಶ್ವರ ಮತ್ತು ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸಹಿತ ನಂದನಹಿತ್ಲು ಶ್ರೀ ವೈದ್ಯನಾಥ ದೈವಸ್ಥಾನ ಮತ್ತು ಕಾಡಬೆಟ್ಟು ಶ್ರೀ ಕೊಡಮಣಿತ್ತಾಯ ಪಂಜುಲಿ೯, ಬ್ರಹ್ಮಬೈದಕ೯ಳ ಗರಡಿಯಲ್ಲಿ ಕಳೆದ ಹಲವು ವಷ೯ಗಳಿಂದ ವಾದಕರಾಗಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳ: ಹಿರಿಯ ನಾಗಸ್ವರ ವಾದಕ ಚೆನ್ನಪ್ಪ ಸಪಲ್ಯ ಕಾಡಬೆಟ್ಟು ನಿಧನ"