ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಅನಗತ್ಯ ವಿಚಾರಗಳನ್ನು ತಂದು ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಯ ಸಮನ್ವಯ ಸಮಿತಿ ಆಶ್ರಯದಲ್ಲಿ ಬುಧವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು. ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ, ಪ್ರಮುಖರಾದ ನ್ಯಾಯವಾದಿ ನೋಟರಿ ಎಂ.ಚಂದ್ರಶೇಖರ ಪೂಜಾರಿ, ಬಿ.ಶೇಖರ್, ಪ್ರಕಾಶ್ ಶೆಟ್ಟಿ, ರಾಜಾ ಚಂಡ್ತಿಮಾರ್, ರಾಮಣ್ಣ ವಿಟ್ಲ, ಸದಾಶಿವ ಬಂಗೇರ, ನ್ಯಾಯವಾದಿ ತುಳಸೀದಾಸ್ ವಿಟ್ಲ, ಸುರೇಂದ್ರ ಕೋಟ್ಯಾನ್, ಉದಯ ಕುಮಾರ್, ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಗಂಗಾಧರ, ಪ್ರಕಾಶ ಶೆಟ್ಟಿ ಮುಂತಾದವರು ಸಭೆಯ ನೇತೃತ್ವ ವಹಿಸಿದ್ದರು. ಸುರೇಶ್ ಕುಮಾರ್ ಸ್ವಾಗತಿಸಿ,ಲೋಕೇಶ್ ಸುವರ್ಣ ವಂದಿಸಿದರು. ಬಳಿಕ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವೈಫಲ್ಯ ಮರೆಮಾಚುತ್ತಿರುವ ಸರ್ಕಾರ: ಸಮಾನ ಮನಸ್ಕ ಸಂಘಟನೆಗಳ ಆರೋಪ"