ಬಂಟ್ವಾಳ: ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆಗಸ್ಟ್ 24ರಿಂದ 29ರವರೆಗೆ ದೇಶವ್ಯಾಪಿ ಮುಷ್ಕರವನ್ನು ಸಿಪಿಎಂ ನಡೆಸುತ್ತಿದ್ದು, ಇದರಂಗವಾಗಿ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪಕ್ಷದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ಮಂಗಳವಾರ ನಡೆಯಿತು.
ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಬಡವರು, ಕಾರ್ಮಿಕರ ಬದುಕು ಇಂದು ಅತಂತ್ರವಾಗಿದೆ ಎಂದು ಹೇಳಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೊರೋನಾ ನಡುವೆ ಜನರಿಗೆ ಭದ್ರತೆ ಮತ್ತು ಧೈರ್ಯ ತುಂಬುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು. ಡಿವೈಎಫ್ಐ ಮುಖಂಡರಾದ ಇಕ್ಬಾಲ್ ಹಳೆಮನೆ, ಸುರೇಂದ್ರ ಕೋಟ್ಯಾನ್, ತುಳಸೀದಾಸ್ ವಿಟ್ಲ, ಸಿಐಟಿಯು ಮುಖಂಡರಾದ ಉದಯಕುಮಾರ್, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್, ಬಿ.ನಾರಾಯಣ, ದಿನೇಶ್ ಆಚಾರಿ, ನಾರಾಯಣ ಅಂಗ್ರಿ, ಗಣೇಶ್ ಪ್ರಭು, ಹಮೀದ್ ಕುಕ್ಕಾಜೆ, ವಿನಯನಡುಮೊಗರು, ಬೆನ್ನಿ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕೇಂದ್ರ ನೀತಿ ವಿರೋಧಿಸಿ ಸಿಪಿಎಂನಿಂದ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ"