ಕಾಲ್ಬೆರಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಸಚಿವ ಸುರೇಶ್ ಕುಮಾರ್ ಗಮನ ಸೆಳೆದಿದ್ದ ಬಂಟ್ವಾಳದ ಕೌಶಿಕ್ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಸುದ್ದಿಯಾಗಿದ್ದ. ಇದೀಗ ಆತನ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೊತ್ತಿದ್ದು, ಮೂಡುಬಿದಿರೆ ಆಳ್ವಾಸ್ ಗೆ ಪಿಯುಸಿ ಕಾಮರ್ಸ್ ಗೆ ಸೇರಿಸಿದ್ದಾರೆ. ಮೂಡುಬಿದಿರೆಯ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ.ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು, ವಾಣಿಜ್ಯ ವಿಭಾಗದ ಶಿಕ್ಷಣಕ್ಕೆ ದಾಖಲಾತಿ ವ್ಯವಸ್ಥೆಗೆ ನೆರವಾದರು. ಕಾಲಿನ ಬೆರಳಿನಿಂದ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾದ ಸಂದರ್ಭ ಕೌಶಿಕ್ ನ ಫಲಿತಾಂಶ ನೋಡಿಕೊಂಡು ಆತನ ಇಚ್ಛೆಯ ವಿಷಯದಲ್ಲಿ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ವಹಿಸುವುದಾಗಿ ಶಾಸಕರು ಭರವಸೆ ನೀಡಿದ್ದರು.
Be the first to comment on "ಕಾಲ್ಬೆರಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾಧಕ ಕೌಶಿಕ್ ಈಗ ಆಳ್ವಾಸ್ ನ ಪಿಯುಸಿ ವಿದ್ಯಾರ್ಥಿ, ವಿದ್ಯಾಭ್ಯಾಸಕ್ಕೆ ಶಾಸಕ ರಾಜೇಶ್ ನಾಯ್ಕ್ ನೆರವು"