ಕೊರೊನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು?

೧. ಆಪತ್ಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿರುವ ಪರ್ಯಾಯವೆಂದರೆ ‘ಆಪದ್ಧಧರ್ಮ! : ‘ಸದ್ಯ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ (ಲಾಕ್‌ಡೌನ್) ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಗೆ ನಿಷೇಧವಿದೆ. ಕೆಲವು ಸ್ಥಳಗಳಲ್ಲಿ ಕೊರೊನಾದ ಸೋಂಕು ಕಡಿಮೆಯಿದ್ದರೂ, ಅಲ್ಲಿನ ಜನರು ಮನೆಯಿಂದ ಹೊರಗೆ ಬರಲು ಅನೇಕ ನಿಷೇಧಗಳಿವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ,  ಉತ್ಸವ ಮತ್ತು  ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿಷೇಧಗಳು ಬಂದಿವೆ. ಕೊರೊನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ. ‘ಆಪದ್ಧರ್ಮ ಅಂದರೆ ‘ಆಪದ್ಧರ್ಮ ಕರ್ತವ್ಯೋ ಧರ್ಮಃ| ಅಂದರೆ ‘ ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು.   ಇಂತಹ ಕಾಲದಲ್ಲಿಯೇ ಶ್ರೀ ಗಣೇಶಚತುರ್ಥಿಯ ವ್ರತ ಮತ್ತು ಗಣೇಶೋತ್ಸವ ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ, ಈ  ಬಾರಿ ಉತ್ಸವದ ಸ್ವರೂಪದಲ್ಲಿ ಅಂದರೆ ಸಾಮೂಹಿಕ ಸ್ವರೂಪದಲ್ಲಿ ಈ ಉತ್ಸವವನ್ನು ಆಚರಿಸಲು ಮಿತಿಯಿದೆ.  ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ‘ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?, ಎಂಬ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ‘ಹಿಂದೂ ಧರ್ಮವು ಯಾವ ಮಟ್ಟದವರೆಗೆ ಹೋಗಿ ಮಾನವನ ವಿಚಾರವನ್ನು ಮಾಡಿದೆ?, ಎಂಬುದನ್ನು ನಾವು ಕಲಿಯಬಹುದು. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಗಮನಕ್ಕೆ ಬರುತ್ತದೆ.

೨. ಗಣೇಶ ಚತುರ್ಥಿಯ ವ್ರತವನ್ನು ಹೇಗೆ ಆಚರಿಸಬೇಕು ? : ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ೧ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೊನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.

ಪ್ರತಿ ವರ್ಷ ಅನೇಕರ ಮನೆಗಳಲ್ಲಿ ಜೇಡಿಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ವರ್ಷ ಯಾವ ಪ್ರದೇಶದಲ್ಲಿ ಕೊರೋನಾ ವೈರಾಣುವಿನ ಸೋಂಕು ಅಲ್ಪ ಪ್ರಮಾಣದಲ್ಲಿದೆಯೋ, ಅಂದರೆ ಯಾವ ಭಾಗದಲ್ಲಿ ಸಂಚಾರಸಾರಿಗೆ ನಿಷೇಧವಿಲ್ಲವೋ, ಅಂತಹ ಸ್ಥಳಗಳಲ್ಲಿ ಎಂದಿನಂತೆ ಗಣೇಶಮೂರ್ತಿಯನ್ನು ತಂದು ಅದನ್ನು ಪೂಜಿಸಬೇಕು.

(‘ಧರ್ಮಶಾಸ್ತ್ರಾನುಸಾರ ಜೇಡಿ ಮಣ್ಣಿನ ಗಣೇಶಮೂರ್ತಿ ಏಕಿರಬೇಕು ?, ಈ ವಿಷಯದ ವಿವರಣೆಯನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ)

ಯಾರಿಗೆ ಏನಾದರೂ ಕಾರಣದಿಂದ ಮನೆಯಿಂದ ಹೊರಗೆ ಬರುವುದು ಸಾಧ್ಯವಿಲ್ಲವೋ, ಉದಾ. ಕೊರೋನಾದ ಸಾಂಕ್ರಾಮಿಕತೆಯಿಂದ ಅಕ್ಕಪಕ್ಕದ ಪರಿಸರ ಅಥವಾ ಕಟ್ಟಡವನ್ನು ‘ನಿಷೇಧಿತ ವಲಯ ಎಂದು ಘೋಷಿಸಿದ್ದರೆ, ಅಲ್ಲಿಯ ಜನರು ತಮಗೆ ಗಣೇಶತತ್ತ್ವದ ಲಾಭವಾಗಬೇಕೆಂದು ತಮ್ಮ ಮನೆಯಲ್ಲಿನ ಗಣೇಶನ ಮೂರ್ತಿ ಅಥವಾ ಗಣೇಶನ ಚಿತ್ರದ ಷೋಡಷೋಪಚಾರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಮಾಡುವಾಗ ‘ಪೂಜೆಯ ‘ಪ್ರಾಣಪ್ರತಿಷ್ಠಾಪನೆ ಈ ವಿಧಿಯನ್ನು ಮಾತ್ರ ಮಾಡಬಾರದು, ಇದನ್ನು ಗಮನದಲ್ಲಿಡಬೇಕು.

೩. ಜ್ಯೇಷ್ಠ ಗೌರಿ ವ್ರತವನ್ನು ಯಾವ ರೀತಿ ಮಾಡಬೇಕು ? : ಕೆಲವು ಮನೆಗಳಲ್ಲಿ ಭಾದ್ರಪದ ಶುಕ್ಲ ಪಕ್ಷ ಅಷ್ಟಮಿಯಂದು ಜ್ಯೇಷ್ಠ ಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವು ಮನೆಗಳಲ್ಲಿ ಕಲ್ಲುಗಳ ರೂಪದಲ್ಲಿ ಮತ್ತು ಇನ್ನು ಕೆಲವು ಮನೆಗಳಲ್ಲಿ ಮುಖವಾಡಗಳನ್ನು ಮಾಡಿ ಅವುಗಳನ್ನು ಪೂಜಿಸಲಾಗುತ್ತದೆ. ಕೊರೊನಾದ ಸಂಕಟದಿಂದ ಯಾರಿಗೆ ಪ್ರತಿವರ್ಷದಂತೆ ಕಲ್ಲುಗಳ ಸ್ವರೂಪದಲ್ಲಿ ಅಥವಾ ಮುಖವಾಡಗಳ ಸ್ವರೂಪದಲ್ಲಿ ಗೌರಿಯ ಪೂಜೆಯನ್ನು ಮಾಡಲು ಸಾಧ್ಯವಿಲ್ಲವೋ, ಅವರು ತಮ್ಮ ಮನೆಯಲ್ಲಿನ ಯಾವುದಾದರೂಂದು ದೇವಿಯ ಮೂರ್ತಿಯ ಅಥವಾ ದೇವಿಯ ಚಿತ್ರದ ಪೂಜೆಯನ್ನು ಮಾಡಬೇಕು.

ವಿಶೇಷ ಸೂಚನೆ : ಗಣೇಶಮೂರ್ತಿಯನ್ನು ತರುವಾಗ, ಹಾಗೆಯೇ ಮೂರ್ತಿಯ ವಿಸರ್ಜನೆಯನ್ನು ಮಾಡುವಾಗ ಮನೆಯ ಕೆಲವೇ ವ್ಯಕ್ತಿಗಳು ಹೋಗಬೇಕು. ಮೂರ್ತಿಯ ವಿಸರ್ಜನೆ ಮಾಡುವಾಗ ತಮ್ಮ ಮನೆಯ ಹತ್ತಿರದ ಕೆರೆ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು. ಈ ಸಮಯದಲ್ಲಿ ಜನಜಂಗುಳಿಯಾಗುವ ಅಪಾಯ ಹೆಚ್ಚಿರುವುದರಿಂದ ಕೊರೋನಾ ಸಂದರ್ಭದಲ್ಲಿ ಸರಕಾರವು ಹೇಳಿರುವ ಮಾರ್ಗದರ್ಶಕ ಅಂಶಗಳನ್ನು ಚಾಚುತಪ್ಪದೇ ಪಾಲಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವೇ ಆಗಿದೆ. – ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೭.೨೦೨೦)

೪. ‘ಗಣೇಶಮೂರ್ತಿಯು ಏಕೆ ಜೇಡಿಮಣ್ಣಿನದ್ದಾಗಿರಬೇಕು?, ಈ ವಿಷಯದಲ್ಲಿನ ಧರ್ಮಶಾಸ್ತ್ರದ ಸಂದರ್ಭ ! : ‘ಧರ್ಮಶಾಸ್ತ್ರಾನುಸಾರ ಜೇಡಿಮಣ್ಣಿನ ಮೂರ್ತಿಯನ್ನು ಪೂಜಿಸಿದರೆ, ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಅತ್ಯಧಿಕ ಲಾಭವಾಗುತ್ತದೆ, ಎಂದು ಹಿಂದೂಗಳ ಧರ್ಮಶಾಸ್ತ್ರೀಯ ಗ್ರಂಥಗಳಲ್ಲಿ ಹೇಳಲಾಗಿದೆ.

‘ಧರ್ಮಸಿಂಧುವಿನಲ್ಲಿ ‘ಗಣೇಶಚತುರ್ಥಿಗೆ ಗಣಪತಿಯ ಮೂರ್ತಿ ಹೇಗಿರಬೇಕು?, ಎಂಬ ವಿಷಯದಲ್ಲಿ ಮುಂದಿನ ನಿಯಮಗಳನ್ನು ನೀಡಲಾಗಿದೆ.

ತತ್ರ ಮೃನ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ! – ಧರ್ಮಸಿಂಧು, ಪರಿಚ್ಛೇದ ೨

ಅರ್ಥ: ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಶ್ರೀ ಗಣೇಶನ ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಷೋಪಚಾರ ಪೂಜೆಯನ್ನು ಮಾಡಿ….

ಇನ್ನೊಂದು ಸಂದರ್ಭಕ್ಕನುಸಾರ ‘ಸ್ಮೃತಿಕೌಸ್ತುಭ ಹೆಸರಿನ ಧರ್ಮಗ್ರಂಥದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಸಿದ್ಧಿವಿನಾಯಕನ ವ್ರತವನ್ನು ಮಾಡುವುದರ ಬಗೆಗಿನ ಉಲ್ಲೇಖವಿದೆ. ಇದರಲ್ಲಿ ‘ಮೂರ್ತಿ  ಹೇಗಿರಬೇಕು ?, ಎಂಬುದರ ಸವಿಸ್ತಾರ ವರ್ಣನೆ ಬಂದಿದೆ.

ಸ್ವಶಕ್ತ್ಯಾ ಗಣನಾಥಸ್ಯ ಸ್ವರ್ಣರೌಪ್ಯಮಯಾಕೃತಿಮ್||

ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್|| -ಸ್ಮೃತಿಕೌಸ್ತುಭ

ಅರ್ಥ: ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು.

‘ಇದರಲ್ಲಿ ಬಂಗಾರ, ಬೆಳ್ಳಿ ಅಥವಾ ಮಣ್ಣಿನಿಂದಲೇ ಮೂರ್ತಿಯನ್ನು ತಯಾರಿಸಬೇಕು, ಎನ್ನುವ ಸ್ಪಷ್ಟ ಉಲ್ಲೇಖವಿರುವುದರಿಂದ, ಇದನ್ನು ಹೊರತುಪಡಿಸಿ ಇತರ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಶಾಸ್ತ್ರಾನುಸಾರ ಅಯೋಗ್ಯವಾಗಿದೆ.

ಟಿಪ್ಪಣಿ : ‘ಶ್ರೀ ಗಣೇಶನ ಪೂಜೆಯನ್ನು ಹೇಗೆ ಮಾಡಬೇಕು? ಯಾವ ಸಾಮಗ್ರಿಗಳು ಇರಬೇಕು?, ಈ ಸಂದರ್ಭದಲ್ಲಿ ಯಾರಿಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ, ಅವರು ಸನಾತನದ ‘ಗಣೇಶ ಪೂಜೆ ಮತ್ತು ಆರತಿ, ಈ ಆಪ್ ಡೌನಲೋಡ್ ಮಾಡಬೇಕು ಅಥವಾ ‘ಸನಾತನ ಸಂಸ್ಥೆಯ www.Sanatan.org   ಈ ಜಾಲತಾಣಕ್ಕೆ ಭೇಟಿ ನೀಡಬೇಕು.

‘ಗಣೇಶ ಪೂಜೆ ಮತ್ತು ಆರತಿ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಜಾಲತಾಣಗಳು:

  1. Android App : sanatan.org/ganeshapp
  2. Apple iOS App : sanatan.org/iosganeshapp

ಸೌಜನ್ಯ: ಸನಾತನ ಸಂಸ್ಥೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9342599299

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೊರೊನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*