ಬಿ.ಮೂಡ ಗ್ರಾಮದ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘ ದಿಂದ ನಗದು ಕಳ್ಳವುಗೈದಿದ್ದ ಆರೋಪಿಯನ್ನು ಬಂಟ್ವಾಳನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಿ.ಮೂಡಗ್ರಾಮದ ಪಲ್ಲಮಜಲು ನಿವಾಸಿ ಇಕ್ಕ ಯಾನೆ ಮಹಮ್ಮದ್ ಇಕ್ಬಾಲ್ (51) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಎಸ್ ಐ ಕಲೈಮಾರ್ ಜೊತೆ ಸಿಬ್ಬಂದಿಗಳಾದ ಸುರೇಶ ,ಲೋಕೇಶ , ಉಸ್ಮಾನ ವಾಲಿಕಾರ ,ಶ್ರೀಕಾಂತ, ಬಸಪ್ಪ,ವಿವೇಕ, ಕುಮಾರ ಭಾಗವಹಿಸಿದ್ದರು. ಈತನಿಂದ ನಗದು 1100 ರೂ.,ತಲಾ ಒಂದು ಟಾರ್ಜ್, ಸ್ಕ್ರೂಡ್ರೈವರ್, ಕಬ್ಬಿಣದ ರಾಡ್. ಎಕ್ಸೋ ಬ್ಲೆಡ್ . ಮೀನಿಗೆ ಹಾಕುವ ಗಾಳ,ನೈಲಾನ್ ಹಗ್ಗ ಹೊಂದಿದ್ದ ಬ್ಯಾಗ್ ನ್ನು ವಶಪಡಿಸಲಾಗಿದೆ. ಆಗಷ್ಟ್ 7 ರಂದು ಬಿ.ಮೂಡ ಗ್ರಾಮ ಬಂಟ್ವಾಳ ತಾಲೂಕುಎಂಬವರು ಮೊಂಡಕಾಪು ಹಾಲು ಉತ್ಪಾದಕರ ಸಹಕಾರಿ ಸಂಘ ದಲ್ಲಿ ಕಳವು ಕೃತ್ಯ ನಡೆದಿತ್ತು.
ಶನಿವಾರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಅಮ್ಟಾಡಿ ಗ್ರಾಮದ ಗೋರೆಮಾರ್ ಬಳಿ ಜೋಸೆಫ್ ಕಟ್ಟಡ ಎದುರು ಬ್ಯಾಗ್ ಹಿಡಿದು ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಇಲಾಖಾ ಜೀಪನ್ನು ಕಂಡು ಮರೆಮಾಚಲು ಯತ್ನಿಸಿದ್ದನೆನ್ನಲಾಗಿದೆ. ಅನುಮಾನಗೊಂಡ ಪೊಲೀಸರು ತಕ್ಷಣ ಅತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹೆಸರು ಇಕ್ಕ ಯಾನೆ ಮಹಮ್ಮದ್ ಇಕ್ಬಾಲ್ ಎಂದು ತಿಳಿಸಿದ್ದಾನೆ. ಮತ್ತಷ್ಟು ಅತನನ್ನು ತನಿಖೆಗೊಳಪಡಿಸಿದಾಗ 15 ದಿನಗಳ ಹಿಂದೆಯಷ್ಠೆ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದು, ಊರಿನಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಮತ್ತೆ ಕಳವು ಮಾಡಿಕೊಂಡು ಮೀನು ಹಿಡಿಯಲು ಹೊರಟಿರುವುದಾಗಿ ತಿಳಿಸಿದ್ದಾನೆಯಲ್ಲದೆ ಒಂದು ದಿವಸದ ಹಿಂದೆ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಗದು ಹಣವನ್ನು ಕಳವುಗೈದಿರುವುದನ್ನು ಬಾಯಿಬಿಟ್ಟಿದ್ದಾನೆ. ತಕ್ಷಣ ಈತನನ್ನು ಬಂಧಿಸಿ,ಕೈಯಲ್ಲಿದ್ದ ಬ್ಯಾಗ್ ಸಹಿತ ಸೊತ್ತನ್ನು ವಶಪಡಿಸಲಾಯಿತು. ಬಂಧಿತ ಇಕ್ಕನನ್ನು ಭಾನುವಾರ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
Be the first to comment on "15 ದಿನದ ಹಿಂದೆಯಷ್ಟೇ ಬಿಡುಗಡೆಯಾದ ವ್ಯಕ್ತಿ ಮತ್ತೆ ಕಳ್ಳತನ ಆರೋಪದಲ್ಲಿ ಅರೆಸ್ಟ್"