ಇತ್ತೀಚೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಯುವಕನ ರಕ್ಷಣೆಗೆ ನದಿಗೆ ಧುಮುಕಿದ ಸ್ಥಳೀಯ ಈಜುಗಾರ ಬೇಡಿಕೆಗೆ ಅನುಗುಣವಾಗಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಸೇವಾಂಜಲಿ ರಕ್ಷಕ ಎನ್ನುವ ನಾಡದೋಣಿಯನ್ನು ಕೊಡುಗೆಯಾಗಿ ನೀಡಿತ್ತು. ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಜುಗಾರರಾದ ಸತ್ತಾರ್, ಮಹಮ್ಮದ್ ಮತ್ತವರ ತಂಡ ದೋಣಿಯ ಮೂಲಕ ಜನರ ರಕ್ಷಣೆಗೆ ಸಿದ್ಧಗೊಂಡು ನಿಂತಿದೆ. ಗೃಹರಕ್ಷಕದಳ, ಅಗತ್ಯವಿದ್ದರೆ ವಿಪತ್ತು ನಿರ್ವಹಣಾ ಪಡೆಯೂ ಆಗಮಿಸಲಿದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಬಂಟ್ವಾಳ ತಾಲೂಕಿನ ಏಳು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಂಟ್ವಾಳ ಐಬಿಯ ಬದಲು ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ತೆರೆಯಲಾಗಿದೆ. ಇದುವರೆಗೆ ಯಾರೂ ಆಗಮಿಸಿಲ್ಲ, ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದ್ದರೂ ಮುಂಜಾಗರೂಕತಾ ಕ್ರಮವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

Be the first to comment on "ರಕ್ಷಣಾ ಕಾರ್ಯಕ್ಕೆ ಜೀವರಕ್ಷಕರು ಸನ್ನದ್ಧ"