ಬಂಟ್ವಾಳ: ಕೆದಿಲದ ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ವತಿಯಿಂದ ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಸಂಭ್ರಮಾಚರಣೆಯನ್ನು ಗಾಂಧಿನಗರದ ಶ್ರೀದೇವಿ ಭಜನಾ ಮಂದಿರದಲ್ಲಿ ಆಚರಿಸಲಾಯಿತು.
ರಾಮನಾಮ ತಾರಕ ಮಂತ್ರ ಪಠಣ ಹಾಗೂ 1990ರ ಸಮಯದಲ್ಲಿ ಕೆದಿಲ ಗ್ರಾಮದಿಂದ ಕರಸೇವಕರಾಗಿ ತೆರಳಿದ ರಾಮ್ ಭಟ್ ಮೈರಾ, ಚೆನ್ನಪ್ಪ ಗೌಡ ಕುದುಮಾನು, ಈಶ್ವರ ಸಪಲ್ಯ ವಾಲ್ತಾಜೆ, ಸುಬ್ರಮಣ್ಯ ಭಟ್ ಬಡೆಕ್ಕಿಲ ಅವರನ್ನು ಗೌರವಿಸಲಾಯಿ. ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಕಂಪ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜೆ. ಕೃಷ್ಣ ಭಟ್ ಮಿರಾವನ ಶ್ರೀ ದೇವೀ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ನಿವೃತ್ತ ಸೈನಿಕ ಜನಾರ್ಧನ ಕುಲಾಲ್ ಗಾಣದಕೊಟ್ಯ,ಪ್ರಮುಖರಾದ ಭೀಮ ಭಟ್ ಮಿರಾವನ, ಮುರಳೀಧರ ಶೆಟ್ಟಿ ಕಲ್ಲಾಜೆ, ಬಾಳಪ್ಪ ಗೌಡ ಕುದುಂಬ್ಲಾಡಿ,ಶ್ರೀಕೃಷ್ಣ ಉಪಾದ್ಯಾಯ, ಶಿವಶಂಕರ ಪುತ್ತೂರಾಯ, ಕಾಂತಪ್ಪ ಗೌಡ ಕೊಳಚಪ್ಪು, ಮಾರಪ್ಪ ಸುವರ್ಣ ಪೆರಮುಗೇರು, ನಾರಾಯಣ ಕುಲಾಲ್ ಗಡಿಯಾರ ಮೊದಲಾದವರು ಭಾಗವಹಿಸಿದ್ದರು. ಉಮೇಶ್ ಗಾಂಧಿನಗರ ಕಾರ್ಯಕ್ರಮ ನಿರೂಪಿಸಿದರು, ಮೋನಪ್ಪ ಗೌಡ ಕುದುಮಾನು ವಂದನಾರ್ಪಣೆ ಮಾಡಿದರು.
Be the first to comment on "ಕೆದಿಲ ಶ್ರೀದೇವಿ ಭಜನಾ ಮಂದಿರದಲ್ಲಿ ಸಂಭ್ರಮಾಚರಣೆ"