ಮಂಗಳವಾರ ರಾತ್ರಿಯಿಂದೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳು ಸಂಭವಿಸಿವೆ. ಸಜಿಪನಡು ಗ್ರಾಮದ ಕುಂಜತ್ತಬೈಲು ಎಂಬಲ್ಲಿ ಕರಿಯಪ್ಪ ನಾಯ್ಕ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ದೋಟ ಎಂಬಲ್ಲಿ ದೇವಕಿ ಎಂಬವರ ಮನೆ ಹಾನಿಯಾಗಿದೆ. ರಾಯಿ ಹೇಮಚಂದ್ರ ಶೆಟ್ಟಿಗಾರ್ ಎಂಬವರ ಅಂಗಡಿ ಮತ್ತು ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಂಚಿ ಗ್ರಾಮದ ಚಂದ್ರಹಾಸ ಎಂಬವರ ಮನೆಗೆ ಹಾನಿಯಾಗಿದೆ. ಸಜಿಪನಡು ಗ್ರಾಮದ ವೆಂಕಟೇಶ್ವರ ಭಟ್ ಅವರ 100 ಅಡಿಕೆ ಮರ ಹಾಗೂ 20 ಬಾಳೆ ಗಿಡಗಳು ಮುರಿದುಬಿದ್ದಿವೆ. ವಿಟ್ಲಪಡ್ನೂರು ಗ್ರಾಮದ ಎಸ್. ನಾರಾಯಣ ಭಟ್ ಮನೆಯ ಮೇಲ್ಛಾವಣಿಯ ಶೀಟುಗಳು ಕಳಚಿಬಿದ್ದಿವೆ. ಬಿಳಿಯೂರು ಗ್ರಾಮದ ಇಸ್ಮಾಯಿಲ್ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪೆರ್ನೆ ಗ್ರಾಮದ ಇಬ್ರಾಹಿಂ ಖಲೀಲ್ ಮನೆ, ವಿಟ್ಲ ಕಸ್ಬಾ ಗ್ರಾಮದ ಲಕ್ಷ್ಮೀ ಎಂಬವರ ಮನೆ, ಬಾಳ್ತಿಲ ಗ್ರಾಮದ ಪದ್ಮನಾಭ ಅವರ ಮನೆ, ಇಡ್ಕಿದು ಗ್ರಾಮದ ಚಿಕ್ಕಮ್ಮ ಎಂಬವರ ಮನೆ, ಅನಂತಾಡಿ ಗ್ರಾಮದ ಲೋಕಯ್ಯ ಅವರ ಮನೆಗೆ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಮೀನಾಕ್ಷಿ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುಣಚ ಗ್ರಾಮದ ರತ್ನ ಅವರ ಮನೆಗೆ ಬರೆ ಜರಿದು ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
Be the first to comment on "ವ್ಯಾಪಕ ಮಳೆ: ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿ, ಉರುಳಿದ ಮರಗಳು"