ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ದ.ಕ.ಜಿಲ್ಲಾ ಸಹಕಾರ ಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇವರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಉದ್ಯೋಗ ನೈಪುಣ್ಯ ತರಬೇತಿಯ 2ನೇ ಹಂತದ 4 ವಿಷಯಗಳ ಉದ್ಘಾಟನಾ ಸಮಾರಂಭ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಸೋಮವಾರ ನಡೆಯಿತು.ಆಗಸ್ಟ್ 8 ಶನಿವಾರದವರೆಗೆ.ತರಬೇತಿ ನಡೆಯಲಿದ್ದು, ಮೊಬೈಲ್ ಫೋನ್ ಸರ್ವಿಸ್ಸಿಂಗ್, ಫುಡ್ ಟೆಕ್ನಾಲಜಿ, ಕಸಿ ಕಟ್ಟುವುದು ಮತ್ತು ಸಿಸಿಟಿವಿ ಅಳವಡಿಕೆ ಕುರಿತ ತರಬೇತಿಗಳು ನಡೆಯುತ್ತಿವೆ.
ಶಿಬಿರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ಮಾನವ ಸಂಪನ್ಮೂಲವನ್ನು ಕೌಶಲ್ಯಭರಿತವಾಗಿ ರೂಪಿಸಿಕೊಂಡಾಗ ಸಮೃದ್ಧ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು ಎಂದರು. ಮುಖ್ಯ ಅತಿಥಿ ಸಹಕಾರ ಭಾರತಿಯ ಕೊಂಕೋಡಿ ಪದ್ಮನಾಭ ಶುಭ ಹಾರೈಸಿದರು. ಮಂಗಳೂರು ಗ್ರಾಮವಿಕಾಸ ಸಮಿತಿ ಸಹ ಸಂಯೋಜಕರಾದ ವೆಂಕಟರಮಣ ಹೊಳ್ಳ ಸ್ವಾಗತಿಸಿದರು. ಗೋಳ್ತಮಜಲು ಮಂಡಲ ಗ್ರಾಮವಿಕಾಸ ಪ್ರಮುಖ್ ಪುರುಷೋತ್ತಮ ವಂದಿಸಿದರು. ಗೋಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ಪ್ರಾರ್ಥನೆ ಮತ್ತು ಆಶಯಗೀತೆ ಹಾಡಿದರು.
Be the first to comment on "ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಉದ್ಯೋಗ ನೈಪುಣ್ಯ ತರಬೇತಿಯ 2ನೇ ಹಂತದ ತರಬೇತಿ ಆರಂಭ"