ಕರ್ನಾಟಕ ಕೇರಳ ಗಡಿ ಭಾಗದ ಕೇರಳದ ಬಾಯಾರು ಸಮೀಪ ಕನಿಯಾಲ ಗುರುಕುಮೇರಿ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ರಕ್ತಸಂಬಂಧಿಗಳನ್ನೇ ಹತ್ಯೆ ಮಾಡಿದ್ದಾನೆ. ಸೋಮವಾರ ಘಟನೆ ನಡೆದಿದೆ. ಆರೋಪಿ ಉದಯ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು, ವಿವರಗಳು ಇನ್ನಷ್ಟೇ ತಿಳಿದುಬರಬೇಕು.
ಸದಾಶಿವ, ವಿಠಲ, ಬಾಬು ಮತ್ತು ದೇವಕಿ ಎಂಬವರನ್ನು ಉದಯ ಎಂಬಾತ ಹತ್ಯೆಗೈದುದಾಗಿ ಆರೋಪಿಸಲಾಗಿದ್ದು, ಸ್ಥಳೀಯರು ಆರೋಪಿಯನ್ನು ಹಿಡಿದು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ನಡೆಯುತ್ತಿದ್ದ ವೇಳೆ ಉದಯನ ತಾಯಿ ಲಕ್ಷ್ಮೀ ಓಡಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.ಯಾವುದೋ ದ್ವೇಷ ಕೊಲೆಗೆ ಕಾರಣ ಎನ್ನಲಾಗಿದ್ದು, ಸದಾಶಿವ, ವಿಠಲ ಮತ್ತು ಬಾಬು ಎಂಬವರು ಉದಯನ ಮಾವಂದಿರು ಎನ್ನಲಾಗಿದೆ.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)