ವಾಮದಪದವು

ಅ.18, 19ರಂದು ಇರ್ವತ್ತೂರು ಪದವಿನಲ್ಲಿ “ದಶಾರದ ಸಂಭ್ರಮ-2026” ಲಾಂಛನ ಬಿಡುಗಡೆ

ಇರ್ವತ್ತೂರುಪದವು  ಶ್ರೀ ಶಾರದಾ ಸೇವಾ ಟ್ರಸ್ಟ್, ಶ್ರೀ ಶಾರದೋತ್ಸವ ಸೇವಾ ಸಮಿತಿ ಹಾಗೂ  ದಶಮಾನೋತ್ಸವ ಸಮಿತಿ  ಆಶ್ರಯದಲ್ಲಿ ಅ.18, 19ರಂದು ಇರ್ವತ್ತೂರುಪದವು ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ  “ದಶಾರದ ಸಂಭ್ರಮ-2026” ರ ಲಾಂಛನ ಬಿಡುಗಡೆ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

VNR GOLD

ಧಾರ್ಮಿಕ ಹಾಗೂ ಸಹಕಾರಿ ರಂಗದ ಹಿರಿಯ ಧುರೀಣರಾದ ಕೆ.ಲಕ್ಷ್ಮೀನಾರಾಯಣ ಉಡುಪ ಲಾಂಛನ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್.  ಮಾತನಾಡಿ  ದಶಮಾನೋತ್ಸವ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ, ಕ್ರೀಡೆ, ಸನ್ಮಾನ, ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆ, ಕಲಾ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಅರ್ಥಪೂರ್ಣವಾಗಿ, ಮಾದರಿಯಾಗಿ ರೂಪುಗೊಳ್ಳಲಿದೆ. ಸರ್ವರ ಸಹಕಾರ ಅಗತ್ಯ ಎಂದರು‌.

ಗೌರವಾಧ್ಯಕ್ಷ ಟಿ.ಹರೀಂದ್ರ ಪೈ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ದಶಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ಪೂಜಾರಿ ಬೆನಕ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಶೇಖರ ಪೂಜಾರಿ ಅಗಲ್ದೋಡಿ, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್,  ಟ್ರಸ್ಟ್ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ಸಮಿತಿ ಪ್ರಮುಖರಾದ ಶಂಕರ ಶೆಟ್ಟಿ ಬೆದ್ರಮಾರು, ಸತೀಶ್ ಕರ್ಕೆರಾ ಕಯ್ಯಾಬೆ, ಹರೀಶ್ ಪೂಜಾರಿ ಎರ್ಮೆನಾಡು, ಪ್ರಶಾಂತ್ ದೇವಾಡಿಗ, ಸುಪ್ರೀತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು ಇದರ ಅಂಗವಾಗಿ ಸ್ಪರ್ಧೆಗಳು ನಡೆಯಲಿವೆ. ವಿವರಗಳಿಗೆ ಮುಂದೆ ಓದಿರಿ.

ಜಾಹೀರಾತು

“ದಶಾರದ ಸಂಭ್ರಮ-2026” ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ “ದಶಾರದ ಸಾಂಸ್ಕ್ರತಿಕ ಸಂಭ್ರಮ” ಎಂಬ ವೈವಿದ್ಯಮಯ ಸ್ಪರ್ಧಾ ಕಾರ್ಯಕ್ರಮವನ್ನು ಅ.11ರಂದು ಬೆಳಿಗ್ಗೆ 9.30ರಿಂದ ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಆಯೋಜಿಸಲಾಗಿದೆ.

ಚಿತ್ರಕಲೆ, ಮಕ್ಕಳ ಕುಣಿತ ಭಜನೆ, ಛದ್ಮವೇಷ, ಆಶುನಟನೆ, ಆಶುಭಾಷಣ, ರಂಗೋಲಿ ಹಾಗೂ  ರಸಪ್ರಶ್ನೆ ಸ್ಪರ್ಧೆಗಳು

ನಡೆಯಲಿದ್ದು ಬಹುತೇಕ ಸ್ಪರ್ಧೆಗಳು ಕಿರಿಯ, ಹಿರಿಯ ಪ್ರಾಥಮಿಕ, ಫೌಢ ವಿಭಾಗ ಹಾಗೂ ಮುಕ್ತ ವಿಭಾಗದಲ್ಲಿ ನಡೆಯಲಿದೆ.

ಚಿತ್ರಕಲೆ, ಛದ್ಮವೇಷ, ಆಶು ಭಾಷಣ, ಆಶುನಟನೆ, ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ  ಪ್ರಥಮ 1010/- ದ್ವಿತೀಯ 750/-, ತೃತೀಯ 510/-ನಗದು, ಸ್ಮರಣಿಕೆ, ಪ್ರಮಾಣಪತ್ರ ಮತ್ತು ಪ್ರೋತ್ಸಾಹಕ ಬಹುಮಾನವಿದೆ.

ಕುಣಿತ ಭಜನೆಯ ವಿಜೇತರಿಗೆ ಪ್ರಥಮ 4410/-, ದ್ವಿತೀಯ 3310/-, ತೃತೀಯ 2210/- ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಪ್ರಥಮ 1510/-, ದ್ವಿತೀಯ 750/-, ತೃತೀಯ 550/-ನಗದು, ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ಪ್ರೋತ್ಸಾಹಕ ಬಹುಮಾನವಿದೆ. ಚಿತ್ರಕಲಾ ಸ್ಪರ್ಧೆಯ ಕಲಾಕೃತಿಗಳನ್ನು 07-10-2026 ರ ಒಳಗೆ ಚಿತ್ರಕಲಾ ಶಿಕ್ಷಕರಾದ ಮುರಳೀಕೃಷ್ಣ ರಾವ್ ಕೆ. ‘ಅನುಗ್ರಹ’ ಸಾಯಿ ಮಂದಿರದ ಬಳಿ, ಕೊಡಂಗೆ, ಅಂಚೆ: ಜೋಡುಮಾರ್ಗ, 574219, ಮೊಬೈಲ್ 9740343511 ವಿಳಾಸಕ್ಕೆ ಕಳುಹಿಸುವುದು. ಕುಣಿತ ಭಜನಾ ಸ್ಪರ್ಧೆಯ ವಿಡಿಯೋವನ್ನು 07-10-2026 ರ ಒಳಗೆ ಶಿಕ್ಷಕರಾದ ಶ್ರೀ ಹರಿಪ್ರಸಾದ್ ಆರ್., ಮೊಬೈಲ್ 8197504898 ಸಂಪರ್ಕಕ್ಕೆ ಕಳುಹಿಸುವುದು. ಉಳಿದ ಎಲ್ಲಾ ಸ್ಪರ್ಧೆಗಳು 11-10-2026 ರಂದು ಬೆಳಿಗ್ಗೆ 9.30 ರಿಂದ ಮೂಡುಪಡುಕೋಡಿ ಶಾಲೆ ಮೈದಾನದಲ್ಲಿ ನಡೆಯುವುದು.

ಮುಂಚಿತವಾಗಿ ಹೆಸರು ನೊಂದಾಯಿಸಲು ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್.ಮೊ.: 9448984392,  “ದಶಾರದ ಸಂಭ್ರಮ” ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್ ಮೊ.: 9449104318, ಶ್ರೀ ಶಾರದಾ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ  ದಯಾನಂದ ಎಸ್. ಎರ್ಮೆನಾಡು,  ಮೊ.: 9972781005 ಇವರನ್ನು ಸಂಪರ್ಕಿಸಬಹುದೆಂದು ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.