ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಮತ್ತು ಕೆದ್ದಳಿಕೆ ಶಾಲೆಯ ಮಾದರಿ ಗ್ರಾಮ ಯೋಜನೆಯಡಿ ಶಾಲೆಯಲ್ಲಿ ಎರೆ ಗೊಬ್ಬರ ಘಟಕವನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಉದ್ಘಾಟಿಸಿದರು.ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎರೆಗೊಬ್ಬರ ತೊಟ್ಟಿ ಮಾಡಿ ಕೆದ್ದಲಿಕೆ ಗ್ರಾಮವನ್ನು ಸಾವಯವ ಕೃಷಿಯಲ್ಲಿ ಮಾದರಿ ಗ್ರಾಮ ಮಾಡಲಿ ಎಂದು ತಿಳಿಸಿದರು. ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ಕೆದ್ದಳಿಕೆ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ರಮೇಶ್ ನಾಯಕ್ ರಾಯಿ, ಶಾಲಾ ಮುಖ್ಯೋಪಾಧ್ಯಾರಾದ ಕುಮಾರ್. ಎಚ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ, ಸತೀಶ್ ಪದಂತರಬೆಟ್ಟು, ಬಿವಿಟಿ ಯೋಜನಾಧಿಕಾರಿಯಾದ ಜೀವನ್, ಶಾಲಾ ಶಿಕ್ಷಕರು, ರೈತರು, ಆಶಾ ಕಾರ್ಯಕರ್ತರು ಭಾಗವಹಿಸಿದರು.
Be the first to comment on "ಕೆದ್ದಳಿಕೆ ಶಾಲೆಯಲ್ಲಿ ಎರೆಗೊಬ್ಬರ ಘಟಕ ಉದ್ಘಾಟನೆ"