ಸಂಡೇ ಲಾಕ್ ಡೌನ್ ಗೆ ಬಂಟ್ವಾಳ, ಬಿ.ಸಿ.ರೋಡ್ ಸಹಿತ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಭಾನುವಾರ ಬೆಳಗ್ಗೆಯೇ ಬಂಟ್ವಾಳ, ಬಿ.ಸಿ.ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ ಸ್ತಬ್ದಗೊಂಡಿತ್ತು. ಕೆಲ ಅಂಗಡಿಗಳು ಬಾಗಿಲು ಹಾಕಿದ್ದರೆ, ಹಾಲು, ತರಕಾರಿ ಪತ್ರಿಕಾ ವಿತರಕರಷ್ಟೇ ಕಂಡುಬಂದರು. ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ ಸಹಿತ ಬಂಟ್ವಾಳದಲ್ಲೂ ಕಟ್ಟುನಿಟ್ಟಿನ ಎಚ್ಚರ ವಹಿಸುವುದು ಅನಿವಾರ್ಯವಾಗಿದ್ದು, ಈ ತಿಂಗಳ ಪ್ರತಿ ಭಾನುವಾರವೂ ಲಾಕ್ ಡೌನ್ ಮಾಡಲಾಗುತ್ತಿದೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಮತ್ತು ಬಿ.ಮೂಡ ಗ್ರಾಮಗಳಲ್ಲಿ ಕೊರೊನಾ ಅಬ್ಬರಿಸಿದ್ದು, ಕಳೆದ ಮೂರು ತಿಂಗಳಲ್ಲಿ ಹಲವು ಪ್ರಕರಣಗಳು ಕಂಡುಬಂದಿವೆ.
Be the first to comment on "ಸಂಡೇ ಲಾಕ್ ಡೌನ್: ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಉತ್ತಮ ಪ್ರತಿಕ್ರಿಯೆ"