ಸ್ಮಾರ್ಟ್ ಸಿಟಿ ವತಿಯಿಂದ ಮೀನುಗಾರಿಕಾ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ, ಸುರಕ್ಷಾ ತರಬೇತಿ ಕೇಂದ್ರ

ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂ.ಎಸ್.ಸಿ.ಎಲ್.) ನ ಅಡಿಯಲ್ಲಿ ಮಂಗಳೂರು ನಗರವನ್ನು ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ. ಮೀನುಗಾರಿಕೆಯಲ್ಲಿ ಕೌಶಲಾಭಿವೃದ್ದಿ ತರಬೇತಿಯನ್ನು ನಡೆಸುವ ಉದ್ದೇಶದಿಂದ ಕಾಲೇಜಿನ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ| ಕುಮಾರನಾಯ್ಕ ಎ.ಎಸ್. ರವರು ಸಲ್ಲಿಸಿದ ಯೋಜನಾ ವರದಿಯನ್ನು ಪರಿಗಣಿಸಿ ಎಂ.ಎಸ್.ಸಿ.ಎಲ್. ಸಂಸ್ಥೆಯು 4.75 ಕೋಟಿಗಳ ಧನಸಹಾಯ ಮಂಜೂರು ಮಾಡಿದೆ.

ಇದರ ಪೈಕಿ ಈ ಯೋಜನೆಯಡಿ ಕೌಶಲಾಭಿವೃದ್ದಿ ತರಬೇತಿ ಕೇಂದ್ರದ ನಿರ್ಮಾಣಕ್ಕೆ 2.4 ಕೋಟಿಗಳಷ್ಟು ಅನುಷ್ಟಾನ ಮಾಡಲಾಗಿರುತ್ತದೆ. ಕೇಂದ್ರವನ್ನು ನಿರ್ಮಿಸಲು ಮಂಗಳೂರಿನ ಹೊಯ್ಗೆ ಬಝಾರ್ ನಲ್ಲಿರುವ ಮೀನುಗಾರಿಕಾ ಕಾಲೇಜಿನ ಅಂಗ ಸಂಸ್ಥೆಯಾದ ತಾಂತ್ರಿಕ ವಿಭಾಗವನ್ನು ಆಯ್ಕೆ ಮಾಡಲಾಗಿದೆ. ಕೌಶಲ್ಯಾಭಿವೃದ್ದಿ ತರಬೇತಿಗಾಗಿ 2.35 ಕೋಟಿ ರೂಗಳಷ್ಟು ಮೀಸಲಿಡಲಾಗಿದೆ.

ಕರ್ನಾಟಕ ರಾಜ್ಯದ ಒಟ್ಟು 7 ಸ್ಮಾರ್ಟ್ ಸಿಟಿಗಳಾದ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಮತ್ತು ಮಂಗಳೂರು ಗಳಲ್ಲಿ ನಗರಗಳ ಸೌಂದರ್ಯ ವೃದ್ದಿತಾ ಕಾರ್ಯಗಳ ವಿವಿಧ ಯೋಜನೆಗಳು ಕಾಮಗಾರಿಯಲ್ಲಿವೆ. ಆದರೆ, ಭಾರತ ದೇಶದ ಮೀನುಗಾರಿಕಾ ಕ್ಷೇತ್ರದಲ್ಲಿ ಅದರಲ್ಲೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೌಶಾಲಾಭಿವೃದ್ದಿ ಮತ್ತು ಸುರಕ್ಷ ಕೇಂದ್ರ ಮಂಗಳೂರಿನಲ್ಲಿ ಅಸ್ಥಿತಕ್ಕೆ ಬರುತ್ತಿರುವುದು ಇದೇ ಮೊದಲನೆಯದು ಎಂದು ನೋಡಲ್ ಅಧಿಕಾರಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಅಭಿಪ್ರಾಯ ವ್ಯಕ್ತವಡಿಸಿದ್ದಾರೆ.

ಎರಡು ಮಹಡಿಗಳ ತರಬೇತಿ ಕೇಂದ್ರ ನಿರ್ಮಿಸಲು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಮೇ 13 ರಂದು ವಿಶ್ವವಿದ್ಯಾಲಯದ ಪರವಾಗಿ ಮೀನುಗಾರಿಕಾ ಕಾಲೇಜು ಮತ್ತು ಎಂ.ಎಸ್.ಸಿ.ಎಲ್. ಗಳ ನಡುವೆ ಒಪ್ಪಂದದ ಸಹಿ (ಎಂ.ಒ.ಯು.) ಮಾಡಲಾಯಿತು.

ಈ ಒಪ್ಪಂದದ ಸಭೆಗೆ ಕಾಲೇಜಿನವತಿಯಿಂದ ಕೇಂದ್ರದ ನಿರ್ದೇಶಕರಾಗಿ ಡೀನ್ ಡಾ| ಎ. ಸೆಂಥಿಲ್ ವೆಲ್, ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಸಂಯೋಜಕರಾಗಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು  ಎಂ.ಎಸ್.ಸಿ.ಎಲ್.ನ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್, ಕಾರ್ಯನಿರ್ವಾಹಕ ಇಂಜೀನಿಯರ್ ಚಂದ್ರಕಾಂತ್ ಬಾಣ್ಣೋಥ್ ರವರು ಒಪ್ಪಂದಕ್ಕೆ (ಒಡಂಬಡಿಕೆ) ಸಹಿಮಾಡಿದರು.

ಒಡಂಬಡಿಕೆಯ ಸಭೆಯಲ್ಲಿ ಕಾಲೇಜಿನ ಜಾಗರೂಕತಾಧಿಕಾರಿ ಡಾ| ಕೆ.ಎಸ್. ರಮೇಶ್, ಆಸ್ತಿ ಶಾಖೆಯ ಮುಖ್ಯಸ್ಥ ಡಾ| ಹೆಚ್.ಎನ್. ಅಂಜನೇಯಪ್ಪ, ಸಹ ವಿಸ್ಥರಣಾ ನಿರ್ದೇಶಕ ಡಾ| ಶಿವಕುಮಾರ ಎಂ., ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿ ಡಾ| ಎಸ್.ಆರ್. ಸೋಮಶೇಖರ, ಸಹಾಯಕ ಆಡಳಿತಾಧಿಕಾರಿ ಡಾ| ಎಸ್. ಸಿದ್ದಪ್ಪಾಜಿ ಮತ್ತು ತಾಂತ್ರಿಕ ವಿಭಾಗದ ಪ್ರಭಾರಿ ಡಾ| ಎಸ್. ವರದರಾಜು ಉಪಸ್ಥಿತರಿದ್ದರು. ಎಂ.ಎಸ್.ಸಿ.ಎಲ್.ನ ಸಹಾಯಕ ಇಂಜೀನಿಯರ್ ಅನಂತ್ ಎಸ್. ಶಂಕರ್ ಹಾಜರಿದ್ದರು.

ಎಂ.ಎಸ್.ಸಿ.ಎಲ್. ನ ಮಾಜಿ ಸಹಾಯಕ ಆಯುಕ್ತ ಡಾ| ನಾಗರಾಜ್; ವಿಶ್ವವಿದ್ಯಾಲಯದ ಕುಲಪತಿ ಡಾ| ಹೆಚ್.ಡಿ. ನಾರಾಯಣಸ್ವಾಮಿ, ಕುಲಸಚಿವ ಡಾ| ಕೆ.ಸಿ. ವೀರಣ್ಣ ಮತ್ತು ವ್ಯವಸ್ತಾಪಕ ಮಂಡಳಿ ಸದಸ್ಯರುಗಳ ಸಹಕಾರ ಈ ವಿಶೇಷ ಯೋಜನೆಯನ್ನು ಮೀನುಗಾರಿಕಾ ಕಾಲೇಜಿನಲ್ಲಿ ಅನುಷ್ಟಾನ ಮಾಡಲು ಸಹಕರಿಸಿದ್ದಾರೆಂದು ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.

ಕೌಶಲಾಭಿವೃದ್ಧಿ ಕೇಂದ್ರ ನಿರ್ಮಿಸಲು 9 ತಿಂಗಳ ಸಮಯ ಬೇಕಿದೆ ಹಾಗೂ ಈಗಾಗಲೇ ಕಟ್ಟಡದ ನಿರ್ಮಾಣ ಪ್ರಗತಿಯಲ್ಲಿದೆ. ಕೇಂದ್ರ ಸ್ಥಾಪನೆಯಾದ ನಂತರ ಎರಡು ವರ್ಷಗಳವರೆಗೆ ಒಟ್ಟು 360 ಶಿಭಿರಾರ್ಥಿಗಳಿಗೆ ತರಬೇತಿ ನೀಡುವ ಕರ್ತವ್ಯ ಮೀನುಗಾರಿಕಾ ಕಾಲೇಜಿನದಾಗಿರುತ್ತದೆ. ಕೌಶಲಾಭಿವೃದ್ದಿ ಕೇಂದ್ರದ ಮತ್ತು ತರಬೇತಿಯ ಸಂಯೋಜಕರುಗಳಾಗಿ ಮೀನುಗಾರಿಕಾ ಕಾಲೇಜಿನವತಿಯಿಂದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರೊಫೆಸರ್ ಡಾ| ಕುಮಾರನಾಯ್ಕ ಎ.ಎಸ್. ರವರಾದರೆ, ನಿರ್ದೇಶಕರಾಗಿ ಕಾಲೇಜಿನ ಡೀನ್ ಡಾ| ಎ. ಸೆಂಥಿಲ್ ವೆಲ್ ಆಗಿರುತ್ತಾರೆ.

ಪ್ರತೀ ತರಬೇತಿ ಶಿಭಿರಕ್ಕೆ ತಲಾ 30 ಅಭ್ಯರ್ಥಿಗಳಂತೆ ಆಯ್ಕೆ ಮಾಡಿ 30 ದಿನಗಳವರೆಗೆ ವರ್ಷಕ್ಕೆ 180 ನಿರುದ್ಯೋಗಿ ಯುವಕ-ಯುವತಿ, ಗೃಹಿಣಿ ಹಾಗೂ ಪದವಿ ಮತ್ತು ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟವರಿಗೆ ತರಬೇತಿಯನ್ನು ನೀಡುವ ಗುರಿ ಇದೆ. ಕೌಶಲ್ಯಾಭಿವೃದ್ದಿ ತರಬೇತಿಯನ್ನು ಒಟ್ಟು ಎರಡು ವರ್ಷಗಳವರೆಗೆ ನಡೆಸಲಾಗುವುದು.

ತರಬೇತಿಯನ್ನು ಕೇಂದ್ರದ ಲೋಕಾರ್ಪಣೆಯಾದ ನಂತರ 8 ವಿವಿಧ ವಿಷಯಗಳಲ್ಲಿ ನೀಡಲಾಗುವುದೆಂದು ಕೌಶಲಾಭಿವೃದ್ದಿ ಕೇಂದ್ರ ಹಾಗೂ ತರಬೇತಿಯ ಕೋರಾರ್ಡಿನೇಟರ್ ಆದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು. ಆ 8 ತರಬೇತಿ ವಿಷಯಗಳು ಇಂತಿವೆ:

  1. ಅಕ್ವೇರಿಯಂ ಜೋಡಣೆ, ನಿರ್ವಹಣೆ ಮತ್ತು ಅಲಂಕಾರಿಕಾ ಮೀನುಗಳ ಪಾಲನೆ.
  2. ಅಕ್ವಾಫೋನಿಕ್ / ಹೈಡ್ರೋಫೋನಿಕ್ ಸಮಗ್ರತೆಯ ಏಕಿಕರಣ.
  3. ಮೀನಿನ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ಮತ್ತು ಮಾರಾಟ ವೃದ್ದಿಕೆ.
  4. ಮೀನಿನ ಸಂಸ್ಕರಣೆಯಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಾಗೂ ಧಾರಣೆ.
  5. ಮೀನಿನ ತಾಜ್ಯದಿಂದ ಗೊಬ್ಬರ ತಯಾರಿಕೆ.
  6. ಸ್ಕ್ಯೂಬಾ ಡೈವಿಂಗ್ ಮ್ ಮತ್ತು ಸ್ನಾರ್ಕ್ಲಿಂಗ್.
  7. ಮೀನುಗಾರಿಕೆ ದೋಣಿಗಳ ನವೀಕರಣತೆ ಮತ್ತು ಸುರಕ್ಷತೆ.
  8. ಮೀನಿನ ಬಲೆಗಳ ಹೆಣೆಯುವಿಕೆ ಮತ್ತು ನವೀಕರಣತೆ.

ಎಂ.ಎಸ್.ಸಿ.ಎಲ್. ಸಂಸ್ಥೆಯು ತರಬೇತಿಯ ಸಂಪೂರ್ಣ ಖರ್ಚು-ವೆಚ್ಚವನ್ನು ಭರಿಸುತ್ತದೆಂದು ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಹೇಳಿದರು. ಆಯ್ಕೆ ಮಾಡಲ್ಪಟ್ಟ 8 ವಿವಿಧ ವಿಷಯಗಳ ಜೊತೆಗೆ ಪ್ರಸ್ತುತ ಸಮಯಕ್ಕೆ ಅವಶ್ಯವಿರುವ ಇತರೆ ಮೀನುಗಾರಿಕಾ ತಾಂತ್ರಿಕತೆಗಳನ್ನೂ ಸಹಾ ಬೇಡಿಕೆಯ ಮೇರೆಗೆ ಪರಿಗಣಿಸಿ ಕೌಶಲ್ಯ-ಕಸುತಿ ತರಬೇತಿ ಕೊಡಲಾಗುವುದೆಂದು ಕೂಡ ಈ ಸಂದರ್ಭದಲ್ಲಿ ಅವರು ಪ್ರಸ್ಥಾಪಿಸಿದರು.

ಆಯ್ಕೆಯಾದ ಶಿಭಿರಾರ್ಥಿಗಳಿಗೆ ತರಬೇತಿಯನ್ನು ಅನುಷ್ಟಾನಗೊಳಿಸುವ ಮುನ್ನ ಸಂಪನ್ಮೂಲ ವ್ಯಕ್ತಿಗಳನ್ನು ಟ್ರೈನಿಂಗ್ ಆಫ್ ಟ್ರೈನರ್ ಕಾರ್ಯಾಗಾರದ ಮುಖೇನ ಆರಿಸಲಾಗುವುದು. ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಿಂದ ಈ ಕಾರ್ಯಗಾರವನ್ನು ನಡೆಸಲಾಗುವುದು. ನುರಿತ ವಿಷಯ ತಜ್ಞರುಗಳನ್ನು ಮೀನುಗಾರಿಕಾ ಕಾಲೇಜು, ಪರಿಣಿತ ಸಂಸ್ಥೆಗಳ ತರಬೇತುದಾರರು ಹಾಗೂ ಆಹ್ವಾನಿತ ನುರಿತ ಅತಿಥಿ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಪ್ರಾತ್ಯಕ್ಷೀಯವಾಗಿ ತರಬೇತಿ ನೀಡಲಾಗುವುದೆಂದು ಕೇಂದ್ರದ ನೋಡಲ್ ಆಫಿಸರ್ ಹಾಗೂ ತರಬೇತಿಯ ಸಂಯೋಜಕ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸ್ಮಾರ್ಟ್ ಸಿಟಿ ವತಿಯಿಂದ ಮೀನುಗಾರಿಕಾ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ, ಸುರಕ್ಷಾ ತರಬೇತಿ ಕೇಂದ್ರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*