ಕಾಸರಗೋಡು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡುವ ಅತ್ಯುತ್ತಮ ಸೇವಾ ಪ್ರಶಸ್ತಿಗೆ ಗಡಿನಾಡಿನ ಇಬ್ಬರು ಕನ್ನಡಿಗ ವೈದ್ಯರು ಪಾತ್ರರಾಗಿದ್ದಾರೆ. ಪ್ರತಿವರ್ಷ ವೈದ್ಯ ದಿನಾಚರಣೆ ಸಂದರ್ಭದಲ್ಲಿ ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಅದರಂತೆ ಈ ವರ್ಷದ ಅತ್ಯುತ್ತವ ವೈದ್ಯ ಪ್ರಶಸ್ತಿಗೆ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಜನಾರ್ದನ ನಾಯ್ಕ್ ಮತ್ತು ಡಾ. ನಾರಾಯಣ ಪ್ರದೀಪ ಪೆರ್ಮುಖ ಅವರು ಈ ಪ್ರತಿಷ್ಠಿತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Dr. NARAYANA PRADEEP
ಡಾ. ನಾರಾಯಣ ಪ್ರದೀಪ್: ಅಖಿಲ ಭಾರತ ವೈದ್ಯ ವಿಜ್ಞಾನ ಸಂಘಟನೆಯ (ಐಎಂಎ) ಕಾಸರಗೋಡು ಘಟಕದ ಅಧ್ಯಕ್ಷರಾಗಿರುವ ಡಾ. ನಾರಾಯಣ ಪ್ರದೀಪ ಪೆರ್ಮುಖ ಅವರು ಬದಿಯಡ್ಕ ಸಮೀಪದ ಪೆರ್ಮುಖ ಈಶ್ವರ ಭಟ್ ಮತ್ತು ಕುಸುಮಾ ದಂಪತಿಯ ಪುತ್ರರಾಗಿದ್ದಾರೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಸಹಾಯಕ ನೋಡಲ್ ಅಧಿಕಾರಿಯಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Dr. JANARDHAN NAIK
ಡಾ. ಜನಾರ್ದನ ನಾಯ್ಕ್: ಐಎಂಎ ಕಾಸರಗೋಡು ಘಟಕದ ಸಕ್ರಿಯ ಸದಸ್ಯರಾಗಿರುವ ಇವರು, ನೀರ್ಚಾಲು ಸಮೀಪದ ಮಾನ್ಯ ಚುಕ್ಕಿನಡ್ಕದ ಕೊರಗು ನಾತಯ್ಕ್ ಮತ್ತು ಪರಮೇಶ್ವರಿ ದಂಪತಿಯ ಪುತ್ರರಾಗಿದ್ದಾರೆ.
Be the first to comment on "ಕಾಸರಗೋಡಿನ ಕನ್ನಡಿಗ ವೈದ್ಯರಿಬ್ಬರಿಗೆ ಐಎಂಎ ಶ್ರೇಷ್ಠ ವೈದ್ಯ ಪ್ರಶಸ್ತಿ"