ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ 78% ಫಲಿತಾಂಶ ಪಡೆದಿದ್ದು, ಒಟ್ಟು ಶೇಕಡಾ 86 ಫಲಿತಾಂಶ ದಾಖಲಿಸಿರುತ್ತದೆ.
ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ, ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಆಶ್ವಿತಾ 566 ಅಂಕಗಳು (ಅರ್ಥಶಾಸ್ತ್ರ 100) ದೀಪ್ತಿ ಎನ್. 551 ಅಂಕಗಳು (ಲೆಕ್ಕಶಾಸ್ತ್ರ 100), ಗೌರವ್ 550 ಅಂಕಗಳು (ಇತಿಹಾಸ 100) ಹಾಗೂ ನವ್ಯ 550 ಅಂಕಗಳನ್ನು ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಫಾತಿಮತ್ ನಿಶಾ 547 ಅಂಕಗಳು (ಇತಿಹಾಸ 100), ಫಾತಿಮತ್ ಫರ್ವೀನಾ 537 ಅಂಕಗಳು (ಇತಿಹಾಸ 100), ಹಾಗೂ ಆಯಿಶತುಲ್ ಜಿಸ್ತಿಯಾ 528 ಅಂಕಗಳನ್ನು ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಮುರ್ಷಿದಾ ಬಾನು 522 ( ಗಣಿತ 100 ಅಂಕಗಳು), ಭವಿತ್ 516 ಅಂಕಗಳು ಹಾಗೂ ಮಹಮ್ಮದ್ ಆಸಿರ್ 512 ಅಂಕಗಳನ್ನು ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ 73 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 57 ವಿದ್ಯಾರ್ಥಿಗಳು ಉತ್ತೀರ್ಣ, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 73 ವಿದ್ಯಾರ್ಥಿಗಳು ಉತ್ತೀರ್ಣ ಹಾಗೂ ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Be the first to comment on "ಪಿಯುಸಿ ಫಲಿತಾಂಶ: ಬಿಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್"