ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೋವಿಡ್ 19ಗೆ ಸಂಬಂಧಿಸಿ ಒಟ್ಟು 196 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,230 ಆದಂತಾಗಿದೆ. ಆದರೆ ಇವರ ಪೈಕಿ 876 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಂದು ಒಂದೇ ದಿನ 94 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಹೊರಡಿಸಿದ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಅದರ ಪ್ರಕಾರ, 24,741 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆದಿದೆ. ಅವುಗಳ ಪೈಕಿ 22,511 ಮಂದಿಗೆ ಕೊರೊನಾ ಸೋಂಕು ಇಲ್ಲ. 2,230 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 196 ಇವತ್ತು ವರದಿಯಾಗಿದೆ. ಈ ಪ್ರಕಾರ, 1,308 ಮಂದಿ ಜಿಲ್ಲೆಯ ನಾನಾ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರೊಂದಿಗೆ ವರದಿಯಾದ ಮರಣ ಪ್ರಕರಣಗಳ ಪಟ್ಟಿಯನ್ನೂ ಜಿಲ್ಲಾಧಿಕಾರಿ ನೀಡಿದ್ದಾರೆ. ಮರಣ ಪ್ರಕರಣಗಳ ಕಾರಣಕ್ಕೆ ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ನಿರೀಕ್ಷಣೆಯಲ್ಲಿದೆ. ಜಿಲ್ಲಾಡಳಿತ ನೀಡಿದ ಪಟ್ಟಿಯಲ್ಲಿ 5 ಮಂದಿ ಕೊರೊನಾ ಸೋಂಕಿತರು ಇಂದು ಸಾವನ್ನಪ್ಪಿದ್ದಾರೆ. ಅವರಲ್ಲಿ 72 ವರ್ಷದ ಪುರುಷ, 50 ವರ್ಷದ ಪುರುಷ, 58 ವರ್ಷದ ಮಹಿಳೆ, 68 ವರ್ಷದ ಮಹಿಳೆ, 55 ವರ್ಷದ ಮಹಿಳೆ ಸೇರಿದ್ದಾರೆ. ಇವರಲ್ಲಿ 68 ವರ್ಷದ ಮಹಿಳೆ ಮತ್ತು 55 ವರ್ಷದ ಪುರುಷ ಇಂದು ಮೃತಪಟ್ಟಿದ್ದರೆ, 58 ವರ್ಷದ ಮಹಿಳೆ ಜುಲೈ 10ರಂದು ಸಾವನ್ನಪ್ಪಿದ್ದರು. ಉಳಿದಿಬ್ಬರು ನಿನ್ನೆ ಮೃತಪಟ್ಟಿದ್ದಾರೆ.
ಬಿ.ಸಿ.ರೋಡಿನ 4 ಸೇರಿದಂತೆ ಬಂಟ್ವಾಳ ತಾಲೂಕಿನಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಇದರೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.
Be the first to comment on "COVID UPDATE: ದಕ್ಷಿಣ ಕನ್ನಡ ಜಿಲ್ಲೆ: ಇಂದು 94 ಮಂದಿ ಡಿಸ್ಚಾರ್ಜ್, 196 ಹೊಸ ಪ್ರಕರಣ ದೃಢ"