Home ಕವರ್ ಸ್ಟೋರಿ
Posted By: Harish Mambady
July 11, 2020
ರಾಜ್ಯದಲ್ಲಿ 70 ಸಾವು, ಇಂದು 2798 ಮಂದಿಗೆ ಸೋಂಕು
Harish Mambady, www.bantwalnews.com
ದಿನಾಂಕ – ಜುಲೈ 4, 2020
ಜಾಹೀರಾತು
ಕೊರೊನಾ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ನೀಡಿದವರ ಸಂಖ್ಯೆ: 15,270. ಪಾಸಿಟಿವ್ 1095. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 75. ಒಟ್ಟು ಸೋಂಕಿತರ ಸಂಖ್ಯೆ 1095. ಚಿಕಿತ್ಸೆ ಪಡೆಯುತ್ತಿರುವವರು 557. ಗುಣಮುಖರಾಗಿ ಹೊರಗೆ ಬಂದವರು 516. ಮೃತಪಟ್ಟವರು 22.
ದಿನಾಂಕ – ಜುಲೈ 11, 2020
ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 22,832. ಪಾಸಿಟಿವ್ 2,034. ಇಂದು ಸೋಂಕಿತರು 186. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 782. ಚಿಕಿತ್ಸೆ ಪಡೆಯುತ್ತಿರುವವರು 1211. ಮೃತಪಟ್ಟವರು 38 .
ಒಂದು ವಾರದಲ್ಲಿ ಏನೇನಾಯಿತು?
ಒಟ್ಟು 7562 ಮಂದಿಯ ಗಂಟಲು ದ್ರವ ಮಾದರಿಯ ತಪಾಸಣೆ ನಡೆದಿದೆ. ಅವರ ಪೈಕಿ 939 ಮಂದಿಗೆ ಸೋಂಕು ದೃಢಪಟ್ಟಿದೆ. 266 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಶನಿವಾರ ಸೋಂಕಿತರ ಒಟ್ಟು ಸಂಖ್ಯೆ 1 ಸಾವಿರ ದಾಟಿದರೆ, ಈ ಶನಿವಾರ 2 ಸಾವಿರ ದಾಟಿದೆ. ಕಳೆದ ಶನಿವಾರ ಹೊಸ ಪ್ರಕರಣಗಳು 75 ಇದ್ದರೆ ಈ ಶನಿವಾರ ಹೊಸ ಪ್ರಕರಣಗಳು 186.
ರಾಜ್ಯದ ಇಂದಿನ ಸ್ಥಿತಿ ಹೀಗಿದೆ
ರಾಜ್ಯದಲ್ಲಿ ಇಂದು 70 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಒಂದೇ ದಿನ 2798 ಮಂದಿಗೆ ಸೋಂಕು ತಗಲಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೇ 20,883 ಇದ್ದರೆ, ಒಟ್ಟು 36,216 ಮಂದಿಗೆ ಸೋಂಕು ತಗಲಿದಂತಾಗಿದೆ. ಐಸಿಯುನಲ್ಲೇ 504 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬಿಡುಗಡೆಯಾದ 880 ಸೇರಿ ಒಟ್ಟು 14,716 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 613 ಮಂದಿ ಇಡೀ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ ಇಂದು 1533 ಹೊಸ ಸೋಂಕು ಸೇರಿ 12,793 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನ 16,862 ಮಂದಿಗೆ ಸೋಂಕು ತಗಲಿದ್ದು, 3839 ಮಂದಿಯಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 229 ಮರಣ ಹೊಂದಿದ್ದಾರೆ. ಅದರ ನಂತರದ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯದ್ದಾಗಿದೆ. ಇಂದು 186 ಪ್ರಕರಣ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 2,026ಕ್ಕೇರಿದೆ. 14 ಮಂದಿ ಬಿಡುಗಡೆ ಹೊಂದಿದ್ದು, ಒಟ್ಟು 746 ಡಿಸ್ಚಾರ್ಜ್ ಆಗಿದ್ದಾರೆ. 1242 ಸಕ್ರಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಉಡುಪಿಯಲ್ಲಿ ಇಂದು 90 ಹೊಸ ಕೇಸ್ ಬಂದಿರುವುದು ಆತಂಕಕಾರಿ.
ಬಂಟ್ವಾಳ ತಾಲೂಕಿನಲ್ಲಿ ಇಂದು ಒಟ್ಟು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನಗಳಲ್ಲಿ ಒಟ್ಟು 61 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಇಂದು ಪುದು ಗ್ರಾಮದ 85 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು 6 ಮಂದಿ ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ. ಬಂಟ್ವಾಳ ಕಸ್ಬಾ ಗ್ರಾಮದಲ್ಲಿ 4, ಕಲ್ಲಡ್ಕದಲ್ಲಿ 1 ಮತ್ತು ಪುದು ಗ್ರಾಮದಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ಸುಮಾರು 75ಕ್ಕೂ ಅಧಿಕ ಮಂದಿಗೆ ತಾಲೂಕಿನಲ್ಲಿ ಸೋಂಕು ದೃಢಪಟ್ಟಿದೆ.
ಜಾಹೀರಾತು
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Related Articles
Be the first to comment on "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 939 ಹೊಸ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ"