ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಲವಾರು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು ಇದರ ಅಡಿಯಲ್ಲಿ ಹಿಂದು ಜಾಗರಣ ವೇದಿಕೆ ದೇಶದ ನಾನ ಕಡೆ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಪುತ್ತೂರು ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಹೇಳಿದರು.
ಅವರು ಹಿಂದು ಜಾಗರಣ ವೇದಿಕೆ ,ಕರ್ಪೆ ಘಟಕಕ್ಕೆ ಪುನರಪಿ ಚಾಲನೆ ನೀಡಿ ಮಾತಾನಾಡಿದರು. ಪುತ್ತೂರು ಜಿಲ್ಲಾ ಹಿಂ.ಜಾ.ವೇ.ಅದ್ಯಕ್ಷರಾದ ಜಗದೀಶ್ ನೇತ್ರಕೆರೆ, ಕಾರ್ಯದರ್ಶಿ ಚಂದ್ರ ಕಲಾಯಿ, ಪುತ್ತೂರು ಜಿಲ್ಲಾ ಹಿಂ.ಜಾ.ವೇ.ಹಿಂದು ಯುವವಾಹಿನಿ ಸಂಪರ್ಕ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ,ಬಂಟ್ವಾಳ ತಾಲೂಕು ಹಿಂ.ಜಾ.ವೇ.ಅದ್ಯಕ್ಷ ತಿರುಲೇಶ ಬೆಳ್ಳೂರು ಉಪಸ್ಥಿತರಿದ್ದರು. ವಿಶೇಷವಾಗಿ ಆಹ್ವಾನಿತರಾಗಿ ಸ್ಥಳೀಯ ಜಿಲ್ಲಾ ಪಂಚಾಯತ ಸದಸ್ಯ ರಾದ ತುಂಗಪ್ಪ ಬಂಗೇರ, ಪ್ರಮುಖರಾದ ರತ್ನಕುಮಾರ್ ಚೌಟ, ಸಂದೇಶ್ ಶೆಟ್ಟಿ ಭಾಗವಹಿಸಿದ್ದರು. ನೂತನ ಘಟಕವನ್ನು ಭಾರತ ಮಾತೇ ಗೆ ದೀಪ ಬೇಳಗಿಸಿ ಪುಷ್ಪಾರ್ಚಣೆ ಮಾಡುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಭಟ್ ದೋಟ ನೇರೆವೆರಿಸಿ ಕೊಟ್ಟರು. ಪ್ರಮುಖರಾದ ಚಂದ್ರಶೇಖರ ಪೂವಳ, ಉಮೇಶ್ ಗೌಡ, ದಿನೇಶ್ ಶೆಟ್ಟಿ, ಸುಂದರ ಪೂಜಾರಿ, ಪುರಂದರ ಭಟ್, ಪ್ರಸಾದ್ ಹಲಕ್ಕೆ ಉಪಸ್ಥಿತರಿದ್ದರು.ನೂತನ ಸಮಿತಿಯನ್ನು ಜಿಲ್ಲಾ ಅದ್ಯಕ್ಷರು ಘೋಷಣೆ ಮಾಡಿದರು. ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸ್ಸಿ.ಕಾರ್ಯಕ್ರಮ ನಿರೂಪಣೆ ಮಾಡಿದರು.
ಹಿಂದು ಜಾಗರಣ ವೇದಿಕೆ ಕರ್ಪೆ ಘಟಕ ಅದ್ಯಕ್ಷರಾಗಿ ನವೀನ ಪೂಜಾರಿ ಉಪಾಧ್ಯಕ್ಷ ರಾಗಿ ರಂಜೀತ್ ಪೂವಳ,ಪ್ರಧಾನ ಕಾರ್ಯದರ್ಶಿ ಯಾಗಿ ತೇಜಾಸ್ ಪೂಜಾರಿ ಅಯ್ಕೆಗೊಂಡರು. ಇತರ ಪಧಾದಿಕಾರಿಗಳು:ಕಾರ್ಯದರ್ಶಿ ಗಳಾಗಿ: ಹರೀಸ್ ಪಾದೆ, ರಾಜೇಶ್ ಪೂಜಾರಿ ನಡಿಬೈಲು, ಉದಯ ದೋಟ,ರಾಮಕೃಷ್ಣ ನಾಯಕ್ ಕಿನ್ನಾಜೆ, ಸಂಪರ್ಕ ಪ್ರಮುಖ್ ರಾಗಿ ರಾಜೇಂದ್ರ ಪೂಜಾರಿ ನೆಕ್ಲಾಜೆ ಕರ್ಪೆ,ಹಿಂದು ಯುವವಾಹಿನಿ ಸಂಯೋಜಕರಾಗಿ ಗಂಗಾಧರ(ಗಂಗು)ಮಂದಿರ ಕರ್ಪೆ,ಸಹ ಸಂಯೋಜಕರಾಗಿ ಅನುಷ್ ಅಡಂಗಾಜೆ,ನಿಧಿ ಪ್ರಮುಖ್ ರಾಗಿ ಹರೀಶ್ ವರಸಾರಿ,ಮಾತೃ ಸುರಕ್ಸರಾಗಿ ಜಯಚಂದ್ರ ದೋಟ ಕರ್ಪೆ ಅಯ್ಕೆಯಾಗಿದ್ದಾರೆ.
Be the first to comment on "ಕರ್ಪೆ ಹಿಂದು ಜಾಗರಣಾ ವೇದಿಕೆಗೆ ಚಾಲನೆ"