ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ (ರಿ) (ತ್ರಿಮತಸ್ಥ) ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೃಷ್ಣರಾಜ ಭಟ್ ಕರ್ಬೆಟ್ಟು ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ನಡೆಯಿತು. ರಾಜ್ಯಾಧ್ಯಕ್ಷ ವೇದಬ್ರಹ್ಮ ವಿದ್ವಾನ್ ಎಂ.ಎಲ್.ವಿಶ್ವೇಶ್ವರ ಭಟ್ಟರು ಧ್ವನಿ ಸಂದೇಶದ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ಶುಭ ಕೋರಿದರು. ಹಿರಿಯ ಉಪಾಧ್ಯಕ್ಷ ವೇದಬ್ರಹ್ಮ ಡಾ. ರಾಘವೇಂದ್ರ ಭಟ್ಟರು ಪರಿಷತ್ತಿನ ಕಾರ್ಯ ಚಟುವಟಿಕೆಯ ಮಾರ್ಗದರ್ಶನವನ್ನು ನೀಡಿದರು. ಪ್ರತಿಜ್ಞಾವಿಧಿಯೊಂದಿಗೆ ಅಧಿಕಾರ ಸ್ವೀಕರಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಮುಕ್ತವಾಗಿ ಅಭಿಪ್ರಾಯಗಳನ್ನು ಮಂಡಿಸಿ ಮುಂದಿನ ತಾಲೂಕು ಸಮಿತಿಯ ರಚನೆ ಮತ್ತು ಸದಸ್ಯತ್ವ ನೋಂದಣಿಯ ಜವಾಬ್ದಾರಿಯನ್ನು ಹಂಚಿಕೊಂಡರು. ಜಿಲ್ಲಾ ಕಾರ್ಯದರ್ಶಿ ವೇದಮೂರ್ತಿ ರಾಘವೇಂದ್ರ ಹೊಳ್ಳ ವಂದಿಸಿದರು. ಜಿಲ್ಲಾ ಕೋಶಾಧ್ಯಕ್ಷ ವೇ.ಮೂ. ಡಾ. ಸತ್ಯಕೃಷ್ಣ ಭಟ್, ರಘುರಾಮ ರಾವ್ ಉಪಸ್ಥಿತರಿದ್ದರು.
Be the first to comment on "ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತ ಪರಿಷತ್ ಸಂಘ ಜಿಲ್ಲಾಧ್ಯಕ್ಷರಾಗಿ ಕೃಷ್ಣರಾಜ ಭಟ್ ಕರ್ಬೆಟ್ಟು ಆಯ್ಕೆ"