ಬಂಟ್ವಾಳ: ಲಾಕ್ ಡೌನ್ ಸಂದರ್ಭ ಕಾರ್ಮಿಕರಿಗೆ ಸಂಬಳ ಸಿಗದೆ ಕುಟುಂಬ ಉಪವಾಸ ಬಿದ್ದಿದ್ದು. ಸರ್ಕಾರದ ಪರಿಹಾರ ನಿರ್ದಿಷ್ಟ ಫಲಾನುಭವಿಗಳಿಗೆ ದೊರಕಿಲ್ಲ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಜೆಸಿಟಿಯು ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಹಕ್ಕೊತ್ತಾಯ ಪ್ರದರ್ಶನ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಎದುರು ನಡೆಯಿತು.
ಸಭೆಯನ್ನುದ್ದೇಶಿಸಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಶೇಖರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿದರು. ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಉಪಸ್ಥಿತರಿದ್ದರು. ಎಐಟಿಯುಸಿ ತಾಲೂಕು ಮುಖಂಡರಾದ ಬಿ.ಬಾಬು ಭಂಡಾರಿ, ಸರಸ್ವತಿ ಕಡೇಶ್ವಾಲ್ಯ, ಶಮಿತಾ, ಹರ್ಷಿತ್, ಸರೋಜಿನಿ ಕುರಿಯಾಳ ಹಾಗೂ ಸಿಐಟಿಯು ತಾಲೂಕು ಮುಖಂಡರಾದ ಲೋಲಾಕ್ಷಿ, ಟೂರಿಸ್ಟ್ ವಾಹಕ ಚಾಲಕರ ಸಂಘಟನೆ(ಸಿಐಟಿಯು) ಕಾರ್ಯದರ್ಶಿ ಗುಣಕರ್, ಭಾರತೀಯ ಮಹಿಳಾ ಒಕ್ಕೂಟ(ಎನ್ ಎಫ್ ಐ ಡಬ್ಯೂ) ಅಧ್ಯಕ್ಷೆ ಭಾರತಿ ಪ್ರಶಾಂತ್, ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಯುವ ವಕೀಲ ತುಳಸೀದಾಸ್ ವಿಟ್ಲ, ಡಿವೈಎಫ್ಐ ಜಿಲ್ಲಾ ಮುಖಂಡ ಮೊಹಮ್ಮದ್ ಇಕ್ಬಾಲ್ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 15 ಪ್ರಮುಖ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗೆ ಬಂಟ್ವಾಳ ತಹಶ್ಹೀಲ್ದಾರರ ಮುಖೇನ ಅರ್ಪಿಸಲಾಯಿತು.
Be the first to comment on "ಬಂಟ್ವಾಳದಲ್ಲಿ ಕಾರ್ಮಿಕ ಸಂಘಟನೆಗಳ ಹಕ್ಕೊತ್ತಾಯ ಪ್ರದರ್ಶನ"