ದುಷ್ಕರ್ಮಿಗಳು ಕೋತಿಯ ಸೊಂಟಕ್ಕೆ ಬೆಲ್ಟ್ ತೊಡಿಸಿದ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆದಿದೆ. ಕಾರಿಂಜ ಕ್ಷೇತ್ರ ಕೋತಿಗಳಿಗೆ ಪ್ರಸಿದ್ಧ. ಇಲ್ಲಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿರುವ ಸುಮಾರು 50ಕ್ಕೂ ಅಧಿಕ ಕೋತಿಗಳು ಅಲ್ಲಿಗೆ ಬರುವ ಭಕ್ತರಿಂದ ಆಹಾರ ಹಾಗೂ ದೇವಸ್ಥಾನದ ನೈವೇದ್ಯ ಭೋಜನದ ಪ್ರಸಾದವನ್ನು ಸೇವಿಸುತ್ತವೆ. ಸಾಮಾನ್ಯವಾಗಿ ಅಲ್ಲಿಗೆ ವಿಹಾರಕ್ಕೆಂದು ಬರುವವರು ಕೋತಿಗಳಿಗೆ ಕೀಟಲೆ ಮಾಡುವುದುಂಟು. ಆದರೆ ಇದು ಅತಿರೇಕಕ್ಕೆ ಹೋದದ್ದು ಮಂಗಳವಾರ ಬೆಳಕಿಗೆ ಬಂದಿದೆ. ದೇವಸ್ಥಾನ ದ ಕೆಳಭಾಗದಲ್ಲಿರುವ ಗದಾ ತೀರ್ಥ ಕೆರೆಯ ರಥ ಬೀದಿಯಲ್ಲಿ ಈ ಕೋತಿ ಕಂಡು ಬಂದಿದ್ದು, ಸುಮಾರು ಏಳೆಂಟು ದಿನಗಳ ಹಿಂದೆ ಬೆಲ್ಟ್ ತೊಡಿಸಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ದೇವಸ್ಥಾನ ದ ಮೇನೇಜರ್ ಸತೀಶ್ ಪ್ರಭು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Be the first to comment on "ಕಾರಿಂಜದ ಕೋತಿಗೆ ಬೆಲ್ಟ್ ತೊಡಿಸಿದ ದುಷ್ಕರ್ಮಿಗಳು"