ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಲಭ್ಯವಾದ ಗಂಟಲು ದ್ರವ ಮಾದರಿಯ 458 ವರದಿಗಳಲ್ಲಿ 32 ಪಾಸಿಟಿವ್ ಬಂದಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ 695 ಮಂದಿ ಸೇರಿ ಜಿಲ್ಲೆಯಲ್ಲಿ ಒಟ್ಟು 705 ಕೊರೊನಾ ಪಾಸಿಟಿವ್ ಕೇಸ್ ಗಳು ವರದಿಯಾದಂತಾಗಿದೆ. ಇವುಗಳ ಪೈಕಿ 426 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಅವರಲ್ಲಿ ಇಂದು ನಾಲ್ವರು ಬಿಡುಗಡೆಗೊಂಡಿದ್ದಾರೆ. ಇಂದು 148 ಮಂದಿಯ ಗಂಟಲು ದ್ರವ ಮಾದರಿಯನ್ನು ಕಳಿಸಲಾಗಿದೆ. ಒಟ್ಟು 14 ಮಂದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಇದುವರೆಗೆ 13,440 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ಮಾಡಲಾಗಿದ್ದು, 13,292 ಮಂದಿಯ ಸ್ಯಾಂಪಲ್ ದೊರಕಿದೆ. ಒಟ್ಟು ನಾಲ್ವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ತಾಲೂಕಿನ ನಿವಾಸಿ 49 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ತೀವ್ರ ನ್ಯೂಮೋನಿಯಾದಿಂದ ಬಳಲುತ್ತಿದ್ದು, 28ರಂದು ವೆನ್ಲಾಕ್ ಗೆ ದಾಖಲಾಗಿದ್ದರು. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ 29ರಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ತಿಳಿಸಿದ್ದಾರೆ.
ಇಂದಿನ ವಿವರ ಹೀಗಿದೆ: ಇಂದು 32 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಈ ಪೈಕಿ 1 ಅಂತಾರಾಜ್ಯದವರು, 9 ಐಎಲ್ ಐ, 6 ಎಸ್ ಎಆರ್ ಐ ಪ್ರಕರಣಗಳು. 5 ಮಂದಿಯ ಸಂಪರ್ಕ ಪತ್ತೆಯಾಗಿಲ್ಲ, 10 ಮಂದಿ ಪ್ರೈಮರಿ ಸೆಕೆಂಡರಿ ಸಂಪರ್ಕದವರು.
Be the first to comment on "COVID UPDATE: ದ.ಕ.: ಇದುವರೆಗೆ 13,440 ಮಂದಿಯ ಪರೀಕ್ಷೆ: 705 ಪಾಸಿಟಿವ್, ಇಂದು ಹೊಸ 32 ಪ್ರಕರಣ, ಒಂದು ಸಾವು"