ಪಾಣೆಮಂಗಳೂರು ವಲಯ ಪ್ರಗತಿಬಂಧು ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಸಹಯೋಗದೊಂದಿಗೆ ಪರಿಸರ ಜಾಗೃತಿ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ಒಕ್ಕೂಟ ಅಧ್ಯಕ್ಷೆ ಚಿತ್ರಾವತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಗತಿ ಬಂಧು ಒಕ್ಕೂಟದ ಮಾಜಿ ಅಧ್ಯಕ್ಷ ಜಯಂತ ಕಟ್ಟೆಮಾರ್ ಮಂದಿರದ ಮುಂಭಾಗ ಸಂಪಿಗೆಯ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕೊರೋನಾ ಜಾಗೃತಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಗಿಡಗಳನ್ನು ವಿತರಿಸಲಾತು.
ಈ ಸಂದರ್ಭ ಕೃಷಿ ಮೇಲ್ವಿಚಾಲಕರಾದ ಜನಾರ್ದನ, ವಲಯದ ಮೇಲ್ವಿಚಾಲಕರಾದ ಅಮಿತಾ, ವಿಭಾಗದ ಸೇವಾಪ್ರತಿನಿಧಿ ವನಿತಾ, ಶ್ರೀಕೃಷ್ಣ ಮಂದಿರದ ಲೆಕ್ಕಪರಿಶೋಧಕರಾದ ಕುಶಾಲಪ್ಪ ಅಮ್ಟೂರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರಾದ ಪ್ರವೀಣ್ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಶ್ರೀದೇವಿ ಸಂಘದ ಬಬಿತಾ ಸ್ವಾಗತಿಸಿದರು. ವಸಂತ ಪೂವಳ ನಿರೂಪಿಸಿ ವಂದಿಸಿದರು.
Be the first to comment on "ಅಮ್ಟೂರಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ"