ಬಂಟ್ವಾಳ: ಶನಿವಾರ ಬಿ ಸಿ ರೋಡಿನ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಕಂದಾಯ ಶಿರಸ್ತೇದಾರ್ ರಾಜೇಶ್ ನಾಯ್ಕ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಮಾತನಾಡಿ ಕೆಂಪೇಗೌಡರು ನಮ್ಮ ರಾಜಧಾನಿ ಬೆಂಗಳೂರು ನಗರದ ನಿರ್ಮಾತೃ. ಇದು ಇಂದು ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿ ಮೂಡಿ ಬಂದಿದೆ. ಕೆಂಪೆಗೌಡರ ದೂರದೃಷ್ಟಿ ಅದಕ್ಕಾಗಿ ಹಣವನ್ನು ಕ್ರೋಡೀಕರಿಸಿದ ರೀತಿ ಇವೆಲ್ಲವೂ ನಮಗೆ ಮಾದರಿಯಾಗಿವೆ ಎಂದರು. ಈ ಸಂದರ್ಭ ತಾಲೂಕು ಕಚೇರಿ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಶಯ ನಿರ್ವಾಹಕ ವಿಶುಕುಮಾರ್ ಸ್ವಾಗತಿಸಿ ವಂದಿಸಿದರು.
Be the first to comment on "ಬಂಟ್ವಾಳದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ"