COVID19UPDATE: 12 ಸಾವಿರದ ಗಡಿ ತಲುಪಿದ ವೈರಸ್ ಸೋಂಕಿತರ ಸಂಖ್ಯೆ

  • ಲಾಕ್ ಡೌನ್ ಸಡಿಲಿಕೆಯಾಗಿದೆ ಅಂದ್ರೆ ಕೊರೊನಾ ಹೋಗಿದೆ ಎಂದಲ್ಲ – ಜಿಲ್ಲಾಧಿಕಾರಿ ಹೇಳಿದ್ದೇನು?

ಬಂಟ್ವಾಳದ ಮೂವರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 49 ಮಂದಿಗೆ ಕೊರೊನಾ ಸೋಂಕು ಶನಿವಾರ ದೃಢಪಟ್ಟಿದೆ. ಇಂದು ರಾಜ್ಯದಲ್ಲಿ ಒಟ್ಟು 918 ಮಂದಿಗೆ ಸೋಂಕು ಧೃಡಪಟ್ಟರೆ, ಒಟ್ಟಾರೆಯಾಗಿ 11,923 ಮಂದಿಗೆ ಸೋಂಕು ತಗಲಿದಂತಾಗಿದೆ. ಇವರ ಪೈಕಿ 4441 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 7287 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಇಡೀ ರಾಜ್ಯದಲ್ಲಿ 11 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದರೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 191ಕ್ಕೇರಿದೆ. ಐಸಿಯುನಲ್ಲಿ 197 ಮಂದಿ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 371 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಾಹೀರಾತು

ಇಂದು ಬೆಂಗಳೂರು ನಗರದಲ್ಲಿ 596, ದ.ಕದಲ್ಲಿ 49 ಮಂದಿಗೆ ಸೋಂಕು ತಗಲಿದ್ದು ಗೊತ್ತಾಗಿದೆ. ಬೆಂಗಳೂರಿನಲ್ಲೇ ಒಟ್ಟು ಸೋಂಕಿತರು 2531 ಆದರೆ, 1913 ಸಕ್ರಿಯ ಪ್ರಕರಣಗಳಿವೆ. ಉಡುಪಿಯಲ್ಲಿ ಇಂದು 14 ಪ್ರಕರಣಗಳು ಪತ್ತೆಯಾಗಿವೆ. ಉಡುಪಿಯೊಂದರಲ್ಲಿ 1139 ಮಂದಿಗೆ ಸೋಂಕು ತಗಲಿದ್ದರೆ, 99 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ ಜಿಲ್ಲೆಯಲ್ಲಿ ಒಟ್ಟು 184 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾಧಿಕಾರಿ ಹೇಳಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ರಷ್ಟು ಕಂಟೈನ್ಮೆಂಟ್ ವಲಯಗಳಿವೆ. ಇದನ್ನು ಮಾಡಿರುವುದು ನಿಮ್ಮ ಮತ್ತು ಸಮಾಜದ ಒಳಿತಿಗೆ ಮಾಡಿರುವುದು ಎಂದು ತಿಳಿದುಕೊಳ್ಳಬೇಕು. ಯಾರೂ ನಿಯಮ ಉಲ್ಲಂಘಿಸಿ ಓಡಾಡಬೇಡಿ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎಚ್ಚರಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಲಾಕ್ ಡೌನ್ ತೆಗೆದ ಮೇಲೆ ಹಲವಾರು ಮಂದಿ ಕೋವಿಡ್ ಹೊರಟುಹೋಗಿದೆ ಎಂದು ತಿಳಿದುಕೊಂಡಂತಿದೆ. ಮನೆಯಿಂದ ಅವಶ್ಯವಿದ್ದರೆ ಮಾತ್ರ ಹೊರಬರಬೇಕು. ಹೋಂ ಕ್ವಾರಂಟೈನ್ ನಲ್ಲಿ ಇರುವವರು ಮನೆಯಲ್ಲಿ ಬೇರೆಯವರೊಂದಿಗೂ ಅಂತರ ಕಾಪಾಡಬೇಕು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದವರಿಗೂ ಸೋಂಕು ತಗಲುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿರುವ ಅವರು, ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

49 ಪಾಸಿಟಿವ್: ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು ಮಕ್ಕಳು, ವೃದ್ಧರು ಸೇರಿದಂತೆ ಬರೋಬ್ಬರಿ 49 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ ಬಂಟ್ವಾಳ ತಾಲೂಕಿನ ಬಿ.ಕಸ್ಬಾ ಗ್ರಾಮದ ಬಾರೆಕಾಡು, ಅನಂತಾಡಿ ಪುಣಚದ ಪ್ರಕರಣಗಳೂ ಸೇರಿವೆ.

ಸೋಂಕಿತರ ಪೈಕಿ 14 ಮಂದಿ ವಿದೇಶದಿಂದ ಬಂದವರು, 10 ಮಂದಿ ಅನ್ಯ ರಾಜ್ಯಗಳಿಂದ ಬಂದವರು, ಐಎಲ್ಐ ಪ್ರಕರಣದ ಮೂವರು, ಎಸ್ ಎಆರ್ ಐ ಪ್ರಕರಣಗಳ ನಾಲ್ಕು ಮಂದಿ, ಅಂಡರ್ ಟ್ರೇಸಿಂಗ್ ಪ್ರಕರಣಗಳಲ್ಲಿನ ಆರು ಮಂದಿ ಸೇರಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ವೆನ್ಲಾಕ್ ಕೋವಿಡ್ 19 ಆಸ್ಪತ್ರೆಯಲ್ಲಿದ್ದ 38 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜೂ.21 ಮತ್ತು 22ರಂದು ಸೌದಿ ಅರೇಬಿಯ ಮತ್ತು ದಮಾಮ್ನಿಂದ ಬಂದಿದ್ದ 11 ವರ್ಷದ ಬಾಲಕ, 41, 57 ವರ್ಷದ ಪುರುಷರು, 39 ವರ್ಷದ ಮಹಿಳೆ, ಜೂ.23ರಂದು ದುಬೈನಿಂದ ಬಂದಿದ್ದ 68 ವರ್ಷದ ವೃದ್ಧ, 56 ವರ್ಷದ ಮಹಿಳೆ, ಜೂ.19, 23ರಂದು ದುಬೈ, ಖತರ್ನಿಂದ ಆಗಮಿಸಿದ್ದ 57 ಮತ್ತು 23 ವರ್ಷದ ಮಹಿಳೆಯರು ಹಾಗೂ 58, 26, 27, 24 ವರ್ಷದ ಪುರುಷರು. ಜೂ.19ರಂದುಖತರ್ನಿಂದ ಆಗಮಿಸಿದ್ದ 32 ವರ್ಷದ ಪುರುಷ, ಜೂ.21ರಂದು ಶಾರ್ಜಾದಿಂದ ಆಗಮಿಸಿದ್ದ 41, 48 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿತ್ತು. ಇವರೆಲ್ಲರೂ ಕ್ವಾರಂಟೈನ್ನಲ್ಲಿ ಇದ್ದವರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಶನಿವಾರ ಒಟ್ಟು 232 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 49 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 175 ಮಂದಿಯ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 145 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "COVID19UPDATE: 12 ಸಾವಿರದ ಗಡಿ ತಲುಪಿದ ವೈರಸ್ ಸೋಂಕಿತರ ಸಂಖ್ಯೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*