- ಸಚಿವ ಸುರೇಶ್ ಕುಮಾರ್ ಗಮನ ಸೆಳೆದ ಬಂಟ್ವಾಳದ ಬಾಲಕ
ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಕೌಶಿಕ್ ಇದೀಗ ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಕೌಶಿಕ್ ಆತ್ಮವಿಶ್ವಾಸದ ಪ್ರತೀಕ.
ಸಣ್ಣ ವಿಷಯಗಳಿಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಗಳಿಗೆಲ್ಲ ಈತ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ. ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಉಲ್ಲೇಖಿಸಿದ್ದು ಎಲ್ಲರ ಗಮನ ಬಂಟ್ವಾಳ ಪೇಟೆಯ ಕೌಶಿಕ್ ನತ್ತ ನೆಟ್ಟಿದೆ. ಗಣಿತ ಪರೀಕ್ಷೆ ಅಭ್ಯಾಸದಲ್ಲಿ ತಲ್ಲೀನನಾಗಿರುವ ಕೌಶಿಕ್, ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ. ಈತನ ಅಣ್ಣ ಕಾರ್ತಿಕ್. ತಮ್ಮ ಮೋಕ್ಷಿತ್. ಪುಟ್ಟ ಮನೆಯಲ್ಲಿ ವಾಸ. ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಲ್ಲಿ ವೈಕಲ್ಯಗಳಿದ್ದರೂ ಕೌಶಿಕ್ ಯಾರ ಸಹಾಯವೂ ಇಲ್ಲದೆ ಕಾಲ್ಬೆರಳಲ್ಲೇ ಬರೆಯಲು ಕಲಿತಿದ್ದಾನೆ. ಸೈಕಲ್ ನಲ್ಲೇ ಶಾಲೆಗೆ ಹೋಗುತ್ತಿದ್ದ. ಡ್ಯಾನ್ಸ್, ಆಟೋಟಗಳಲ್ಲಿ ಈತ ಶೈನಿಂಗ್ ಸ್ಟಾರ್. ಪಕ್ಕದ ನೇತ್ರಾವತಿಯಲ್ಲಿ ಈಜಲು ಈತ ಹಿಂದೇಟು ಹಾಕಿಲ್ಲ. ಅಸೀಮ ಧೈರ್ಯಶಾಲಿ ಕೌಶಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದಾನೆ. ಈತನಿಗೆ ಆಲ್ ದಿ ಬೆಸ್ಟ್.
Be the first to comment on "ಧೈರ್ಯವಿಲ್ಲದ ತರುಣ ಜನಾಂಗಕ್ಕೆ ಆತ್ಮವಿಶ್ವಾಸ ಬೋಧಿಸುವ ಬಂಟ್ವಾಳದ ಕೌಶಿಕ್, ಶಿಕ್ಷಣ ಸಚಿವರೇ ಭೇಷ್ ಎಂದರು!!"