1,89,463. ಕೊರೊನಾ ಪಾಸಿಟಿವ್ ನಿಂದ ಚಿಕಿತ್ಸೆ ಪಡೆಯುತ್ತಿರುವ ಭಾರತೀಯರು. 3905 ಮಂದಿ ಕರ್ನಾಟಕದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವವರು 143. ವಿವರಗಳು ಇಲ್ಲಿವೆ.
ಕೊರೊನಾ ಎಂಬುದನ್ನು ಮಹಾಮಾರಿ, ಭೂತಪಿಶಾಚಿ ಎಂದೆಲ್ಲಾ ಶಪಿಸುತ್ತಾ ನಾವು ಕುಳಿತುಕೊಳ್ಳುತ್ತಿರುವಂತೆಯೇ ಜಗತ್ತಿನ ದೈನಂದಿನ ಜೀವನದಲ್ಲಿ ಕೋವಿಡ್ 19 ವೈರಸ್ ಹಾಸುಹೊಕ್ಕಾಗಿದೆ. ವಿಶ್ವದಲ್ಲಿ ಇದುವರೆಗೆ 97,47,756 ಮಂದಿಗೆ ಕೊರೊನಾ ಬಾಧಿಸಿದೆ. ಅವರ ಪೈಕಿ 4,92,552 ಮಂದಿ ಮೃತಪಟ್ಟಿದ್ದಾರೆ. 52,76,705 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರು 39,78,499 ಮಂದಿ. ಅವರಲ್ಲಿ 57,472 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಭಾರತದ ಸ್ಥಿತಿ: ಶುಕ್ರವಾರ ಭಾರತ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿ ಕಂಡುಬಂದಿದೆ. ಯು.ಎಸ್.ಎ, ಬ್ರೆಝಿಲ್, ರಷ್ಯಾದ ನಂತರ ಭಾರತವಿದೆ. ಭಾರತದಲ್ಲಿ ಶುಕ್ರವಾರ 822 ಹೊಸ ಕೇಸ್ ಗಳು ಬಂದಿವೆ. ಒಟ್ಟು 4,90,401 ಮಂದಿ ಇದುವರೆಗೆ ಭಾರತದಲ್ಲಿ ಕೊರೊನಾ ಬಾಧಿತರಾಗಿದ್ದು, 15,301 ಮಂದಿ ಮೃತಪಟ್ಟಿದ್ದಾರೆ. 2,85,637 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಹೀಗೆ: ಇಂದು 246 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೂ, ಒಟ್ಟು 6916 ಮಂದಿ ಗುಣಮುಖರಾಗಿದ್ದರೂ ರಾಜ್ಯದಲ್ಲಿ 445 ಹೊಸ ಪ್ರಕರಣಗಳು ಇಂದು ವರದಿಯಾಗಿವೆ. ಅಂದರೆ 3905 ಮಂದಿ ಇನ್ನೂ ಚಿಕಿತ್ಸೆ ಪಡೆಯತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 11,005 ಆಗಿದೆ. ಕೋವಿಡ್ ನಿಂದ 180 ಮಂದಿ ರಾಜ್ಯದಲ್ಲಿ ಇದುವರೆಗೆ ಮೃತಪಟ್ಟಿದ್ದರೆ, ಶುಕ್ರವಾರ ಒಂದೇ ದಿನ 10 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಐಸಿಯುನಲ್ಲಿ 178 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಹೀಗಿದೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 12,744 ಮಂದಿಯ ಗಂಟಲು ದ್ರವ ಮಾದರಿಯನ್ನು ಕಳುಹಿಸಲಾಗಿದೆ. ಅವುಗಳ ಪೈಕಿ 12,542 ಮಂದಿಯ ಫಲಿತಾಂಶ ಬಂದಿದ್ದು, 12,015 ನೆಗೆಟಿವ್ ಘೋಷಣೆಯಾಗಿದೆ. 527 ಮಂದಿಗೆ ಪಾಸಿಟಿವ್ ಬಂದಿದ್ದು ಅವರಲ್ಲಿ 10 ಕೇಸ್ ಗಳು ಹೊರಜಿಲ್ಲೆ, ರಾಜ್ಯದವು.
ಇಂದು 33 ಕೇಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 34 ಮಂದಿ ಗುಣಮುಖರಾಗಿ ಬಿಡುಗಡೆಯಾದರೆ, ಒಟ್ಟು 33 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯದ್ದೇ ಪ್ರಕರಣ ಸಂಖ್ಯೆ 517ಕ್ಕೇರಿದೆ. ಇವುಗಳ ಪೈಕಿ 139 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 10 ಮಂದಿ ಸಾವನ್ನಪ್ಪಿದ್ದಾರೆ. 378 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
ದಿನಕ್ಕೆಷ್ಟು ಸ್ಯಾಂಪಲ್: ಇಂದು 280 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. 202 ಮಂದಿಯ ಟೆಸ್ಟ್ ವರದಿ ಬರಲು ಬಾಕಿ ಇದೆ. ಕೋವಿಡ್ ಶಂಕೆಯಿಂದ 61 ಮಂದಿಯನ್ನು ನಿಗಾದಲ್ಲಿರಿಸಲಾಗಿದೆ.
ಸೌದಿ ಅರೇಬಿಯಾ, ದಮಾಮ್, ಕತಾರ್ ನಿಂದ ಆಗಮಿಸಿದವರು ಸೇರಿದಂತೆ ಇಂದು 33 ಮಂದಿಗೆ ಪಾಸಿಟಿವ್ ಬಂದಿದೆ. ಅವರ ಪೈಕಿ 72 ವರ್ಷದ ಪುರುಷ, ಮತ್ತು 11 ವರ್ಷದ ಬಾಲಕಿಯೂ ಸೇರಿದ್ದಾರೆ.
Be the first to comment on "COVID 19UPDATE:ರಾಜ್ಯದಲ್ಲಿ ಒಟ್ಟು 11 ಸಾವಿರ ಮಂದಿಗೆ ಸೋಂಕು, 6916 ಮಂದಿ ಗುಣಮುಖ, ಇಂದು 445 ಮಂದಿಗೆ ಪಾಸಿಟಿವ್ 10 ಸಾವು"