ಕರೋನಾ ಸಂದರ್ಭ ಪೆಟ್ರೋಲ್, ಡೀಸೆಲ್ ದರ ವನ್ನು ಏರಿಸಿರುವುದಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಸಂದೇಶ ನೀಡಿರುವ ಅವರು, ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀರಾ ಕಡಿಮೆಯಾಗಿದ್ದ ಸಂದರ್ಭವೂ ಮತ್ತೆ ಮತ್ತೆ ದರ ಜಾಸ್ತಿ ಮಾಡುವುದು ಮೋದಿ ಅಭಿಮಾನಿಗಳಿಗೆ ಹೊರತುಪಡಿಸಿ, ಉಳಿದವರೆಲ್ಲರಿಗೂ ತೊಂದರೆಯಾಗಿದೆ. ಯುಪಿಎ ಸರ್ಕಾರವಿದ್ದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ದಾಗಲೂ ಪೆಟ್ರೋಲ್, ಡೀಸೆಲ್ ದರ ನಿಯಂತ್ರಣದಲ್ಲಿತ್ತು ಎಂದು ಹೇಳಿರುವ ರೈ, ಈಗ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳದಂಥ ಕೇಂದ್ರ ಸರ್ಕಾರ, ದಿನಬಳಕೆಯ ವಸ್ತುಗಳಿಗೆ ದರ ಜಾಸ್ತಿಯಾಗುವಂಥ ಸನ್ನಿವೇಶವನ್ನು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಬೆಲೆ ಏರಿಕೆಯನ್ನು ವಿರೋಧಿಸುವ ಕಾರ್ಯವನ್ನು ಮಾಡಬೇಕು ಎಂದು ಜನರಲ್ಲಿ ಅವರು ವಿನಂತಿಸಿದ್ದಾರೆ.
Be the first to comment on "ಕೊರೊನಾ ಸಂದರ್ಭವೂ ಪೆಟ್ರೋಲ್, ಡೀಸೆಲ್ ದರ ಏರಿಕೆ: ರಮಾನಾಥ ರೈ ಟೀಕೆ"