- FOR MORE NEWS JOIN THIS GROUP
https://chat.whatsapp.com/H05sbl2dspf0hI0r3fHVTe
ಪಾಣೆಮಂಗಳೂರಿನಿಂದ ನಂದಾವರಕ್ಕೆ ತೆರಳುವ ರಸ್ತೆ ಪಕ್ಕ ಕಸ ಎಸೆದಿರುವ ವಿಚಾರದ ಕುರಿತು ಓದುಗರು ಬಂಟ್ವಾಳನ್ಯೂಸ್ ಗಮನ ಸೆಳೆದಿದ್ದಾರೆ.
ಪಾಣೆಮಂಗಳೂರಿನಿಂದ ನಂದಾವರಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಪಕ್ಕ ಪ್ರತಿನಿತ್ಯ ಕಾಣಿಸುವ ಕಸದ ರಾಶಿಯನ್ನು ನೋಡಿದರೆ, ಮಾರಕ ರೋಗಗಳು ಬಂದರೂ ಕಸ ಎಸೆಯುವ ಪ್ರವೃತ್ತಿಯನ್ನು ಜನರು ಇನ್ನೂ ನಿಲ್ಲಿಸಿಲ್ಲ ಎಂದು ಭಾಸವಾಗುತ್ತದೆ.
ಬಂಗ್ಲೆಗುಡ್ಡೆ, ನಂದಾವರ, ಪಾಣೆಮಂಗಳೂರು ಪರಿಸರದಲ್ಲಿಯೇ ಇರುವ ಈ ಮಿನಿ ಸೇತುವೆಯನ್ನು ದಾಟಿಯೇ ಜನಸಂಚಾರ ಇರುವ ಕಾರಣ, ಕಸ ತ್ಯಾಜ್ಯಗಳು ರೋಗಭೀತಿಯನ್ನು ಉಂಟುಮಾಡಿದರೆ, ಎಸೆಯುವವರಿಗೂ ಕಡಿವಾಣ ಹಾಕುವ ಕಾರ್ಯವನ್ನು ಇದಕ್ಕೆ ಸಂಬಂಧಪಟ್ಟವರು ಮಾಡಬೇಕಿದೆ.
ಸೇತುವೆ ಕೆಳಗೆ ನೀರು ಪೂರೈಕೆ ಮಾಡುವ ವ್ಯವಸ್ಥೆಯೂ ಇದ್ದು, ನೀರು ಕಲುಷಿತಗೊಳ್ಳುವ ಭೀತಿಯೂ ಎದುರಾಗಿದೆ. ಮಳೆಗಾಲ ಆರಂಭವಾಗಿದ್ದು ಅದರಿಂದ ಕೊಚ್ಚೆನೀರು ಹರಿದು ಟ್ಯಾಂಕಿನ ನೀರಿನಲ್ಲಿ ಸೇರಿದರೆ ಏನು ಮಾಡುವುದು ಎಂಬ ಭೀತಿಯೂ ಇದೆ. ಈಗಾಗಲೇ ಕಸದಿಂದ ಗಬ್ಬು ವಾಸನೆ ಎದ್ದು ಸೊಳ್ಳೆ, ಹುಳ ಕೀಟ ಹೊರ ಬರುತ್ತಿದ್ದು ನಾಯಿಗಳು ಕಸವನ್ನು ರಸ್ತೆಗೆ ಎಳೆದು ತರುತ್ತಿದೆ, ಆದ್ದರಿಂದ ಸಜಿಪಮೂನ್ನೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭೆ ಮತ್ತು ಆರೋಗ್ಯ ಇಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ.
- ನಾಗರಿಕ
Be the first to comment on "ಸಂಬಂಧಪಟ್ಟವರ ಗಮನಕ್ಕೆ: ಪಾಣೆಮಂಗಳೂರು-ನಂದಾವರ ಸಂಪರ್ಕ ರಸ್ತೆ ಪಕ್ಕದಲ್ಲೇ ಕಸ ಹೀಗೆ ಎಸೆದಿದ್ದಾರೆ ನೋಡಿ.."