www.bantwalnews.com Editor: Harish Mambady For Advertisements contact: 9448548127
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ 2ನೇ ಅವಧಿಯ ಕೇಂದ್ರ ಸರಕಾರದ ಮೊದಲನೇ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ದೇಶದ ಜನತೆಗೆ ಬರೆದಿರುವ ಸಂದೇಶ ಪತ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬುಧವಾರ ಕರಿಯಂಗಳ ಗ್ರಾಮದ ಬಡಕಬಲಿನಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ವಿತರಿಸಿದರು.
ಕೇಂದ್ರ ಸರಕಾರ ದೇಶದ ಜನತೆಗಾಗಿ ಜಾರಿ ತಂದ ಜನಪರ ಯೋಜನೆ, ಅಯೋಧ್ಯೆ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ, ತ್ರಿವಳಿ ತಲಾಕ್ ನಿಷೇಧ, ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ನೀಡಿರುವ ೩೭೦ ವಿಽ ರದ್ಧತಿ, ಪೌರತ್ವ ಕಾನೂನಿಗೆ ತಿದ್ದುಪಡಿ ಹೀಗೆ ಹಲವು ದಶಕಗಳ ಗಂಭೀರ ಸಮಸ್ಯೆಗಳನ್ನು ಪ್ರಧಾನಿಯವರು ಬಗೆಹರಿಸಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ವದೇಶಿ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲು ಆತ್ಮನಿರ್ಭರ್ ಭಾರತದ ಮೂಲಕ ಪ್ರಧಾನಿಯವರು ವಿಶ್ವದಲ್ಲಿ ದೇಶವನ್ನು ಗುರುತಿಸುವಂತೆ ಮಾಡಲಿದ್ದಾರೆ ಎಂದು ಶಾಸಕರು ಜನತೆಗೆ ವಿವರಿಸಿದರು. ಈ ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ಸುಕೇಶ್ ಚೌಟ ಬಡಕಬಲು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಶೋಕ್, ಗ್ರಾ.ಪಂ ಸದಸ್ಯೆ ಶಕುಂತಳಾ, ಪ್ರಮುಖರಾದ ಸಂದೀಪ್, ಸೂರ್‌ದಾಸ್, ಸಚಿನ್, ಸತೀಶ್, ಚರಣ್, ಜಯಂತ ಉಪಸ್ಥಿತರಿದ್ದರು.
Be the first to comment on "ಪ್ರಧಾನಿ ಸಂದೇಶ ಮನೆ ಮನೆಗೆ ತಲುಪಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್"