ಕೊರೊನಾ ಸೋಂಕಿತರ ಪಟ್ಟಿಗೆ ರಾಜ್ಯದಲ್ಲಿ 248 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2781ಕ್ಕೇರಿದೆ. ಇವುಗಳ ಪೈಕಿ 1837 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 894 ಮಂದಿ ಬಿಡುಗಡೆ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಆದರೆ ನೆರೆಯ ಉಡುಪಿಯಲ್ಲಿ ಮತ್ತೆ 15 ಪ್ರಕರಣಗಳು ದಾಖಲಾಗಿವೆ. ಇಡೀ ರಾಜ್ಯದಲ್ಲಿ ಇಂದು ಯಾದಗಿರಿ 60, ಕಲಬುರ್ಗಿ 61 ಮತ್ತು ರಾಯಚೂರು 62 ಪ್ರಕರಣಗಳೊಂದಿಗೆ ಗಮನ ಸೆಳೆದರೆ, ಎಂದಿನಂತೆಯೇ ಬೆಂಗಳೂರು, ಉಡುಪಿಯಲ್ಲೂ ವಲಸಿಗರಿಂದ ಪಾಸಿಟಿವ್ ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು 170 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಒಟ್ಟು 581 ಮಂದಿಯ ರಿಪೋರ್ಟ್ ಬಂದಿದ್ದು, 593 ಮಂದಿಯ ಫಲಿತಾಂಶ ಬರಲು ಬಾಕಿ ಇದೆ.
39 ಮಂದಿ ಬಿಡುಗಡೆ: ಇಂದು ಒಟ್ಟು 39 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. 11 ಮಂದಿ ನಿಗಾದಲ್ಲಿದ್ದಾರೆ.
Be the first to comment on "ಕೊರೊನಾ ವೈರಸ್: ರಾಜ್ಯದಲ್ಲಿ ಇಂದು 248 ಹೊಸ ಕೇಸ್"