ಬಂಟ್ವಾಳನ್ಯೂಸ್ ನಲ್ಲಿ ಇತರ ಸುದ್ದಿ, ಲೇಖನಗಳಿಗಾಗಿ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿರಿ
https://chat.whatsapp.com/LNdS3qwTHVYLnGnKXmfSCn
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ಸುಮಾರು 120 ಮನೆಗಳ ನಿವಾಸಿಗಳ ಬದುಕು ಸೀಲ್ ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದು ಈ ಹಿನ್ನಲೆಯಲ್ಲಿ ಇಲ್ಲಿಯ ನಿವಾಸಿಗಳ ಮನೆ ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ಲನ್ನು ಮನ್ನಾ ಮಾಡುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಈ ಕುರಿತು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸೀಲ್ ಡೌನ್ ಪ್ರದೇಶವೆಂದು ಘೋಷಿಸಲಾಗಿದ್ದು ಇಲ್ಲಿಯ ಸುಮಾರು ೧೨೦ ಮನೆಗಳ ಜನರಿಗೆ ಯಾವುದೇ ಮೂಲಭೂತ ಸೌಲಭ್ಯ ದೊರೆತಿಲ್ಲ. ಇದರಿಂದಾಗಿ ಇಲ್ಲಿಯ ಜನರಿಗೆ ದಿನ ನಿತ್ಯದ ಬದುಕು ನಿರ್ವಹಣೆ ಕಷ್ಟವಾಗಿದ್ದು ಈ ಸಂದರ್ಭ ಇಲ್ಲಿನ ನಿವಾಸಿಗಳ ನೀರಿನ ಬಿಲ್/ ಮನೆ ತೆರಿಗೆ/ವಿದ್ಯುತ್ ಬಿಲ್ ಮನ್ನಾ ಮಾಡುವ ಮುಖಾಂತರ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ, ತಾಲೂಕು ಪಂಚಾಯತ್ ಸದಸ್ಯರಾದ ಗಾಯತ್ರಿ ರವೀಂದ್ರ ಸಪಲ್ಯ, ಬಂಟ್ವಾಳ ವಿಧಾನ ಸಭೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್, ನರಿಕೊಂಬು ವಲಯ ಅಧ್ಯಕ್ಷರಾದ ಮಾಧವ ಕರ್ಬೆಟ್ಟು, ಆಲ್ಬರ್ಟ್ ಮಿನೇಜಸ್, ಪಂಚಾಯತ್ ಸದಸ್ಯರಾದ ರವೀಂದ್ರ ಸಪಲ್ಯ ಕೃಷ್ಣಪ್ಪ ನಾಟಿ, ಅರುಣ್ ಶೆಟ್ಟಿ. ಉಪಸ್ಥಿತರಿದ್ದರು.
Be the first to comment on "ಸೀಲ್ ಡೌನ್ ಪ್ರದೇಶಗಳ ನೀರು, ಮನೆ ತೆರಿಗೆ, ವಿದ್ಯುತ್ ಬಿಲ್ ಮನ್ನಾ ಮಾಡಲು ಬ್ಲಾಕ್ ಕಾಂಗ್ರೆಸ್ ಆಗ್ರಹ"