ಬೆಂಗಳೂರಿನಿಂದ ಬಂದ ಮಹಿಳೆಗೆ ಕೊರೊನಾ ಪಾಸಿಟಿವ್, ಬಂಟ್ವಾಳದ ಬಾಲಕಿ ಡಿಸ್ಚಾರ್ಜ್

ಬಂಟ್ವಾಳನ್ಯೂಸ್ ಸಮಗ್ರ ಓದಿಗೆ ವಾಟ್ಸಾಪ್ ಗುಂಪಿನ ಲಿಂಕ್ ಇಲ್ಲಿದೆ:  https://chat.whatsapp.com/GX45mPIvBYmC0f8LI6Ytsf

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಕೇಸ್ 55. (ಇವುಗಳ ಪೈಕಿ 6 ಹೊರಜಿಲ್ಲೆಗೆ ಸೇರಿದ್ದು). ಜಿಲ್ಲೆಯದ್ದೇ ಕೇಸ್ ಗಳು 49. ಇಂದು ಒಂದು ಹೊಸ ಕೇಸ್ ಇದರಲ್ಲಿ ಸೇರಿದೆ. ಚಿಕಿತ್ಸೆ ಪಡೆಯುತ್ತಿರುವವರು 30. ಮೃತಪಟ್ಟವರು 5. ಡಿಸ್ಚಾರ್ಜ್ ಆದವರು 20.

ಇಂದು 302 ಸ್ಯಾಂಪಲ್ ಗಳನ್ನು ಕಳುಹಿಸಲಾಗಿದೆ. 181 ಮಂದಿಯ ವರದಿ ಬಂದಿದೆ. 428 ಸ್ಯಾಂಪಲ್ ಗಳ ಫಲಿತಾಂಶ ಬರಲು ಬಾಕಿ ಇದೆ. 13 ಮಂದಿಯನ್ನು ನಿಗಾದಲ್ಲಿ ಇಡಲಾಗಿದೆ. ಉಸಿರಾಟದ ತೊಂದರೆ ಸಂಬಂಧಿಸಿ 11 ಪ್ರಕರಣಗಳು ಇಂದು ದಾಖಲಾಗಿವೆ.

ಇಂದಿನ ಪಾಸಿಟಿವ್ ಕೇಸ್ ವಿವರ:

ಮೇ 10ರಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಮಂಗಳೂರು ತಾಲೂಕು ನೀರುಮಾರ್ಗ ಕುಟ್ಟಿಕಲ ನಿವಾಸಿ 40 ವರ್ಷದ ಮಹಿಳೆ ಮೇ 17ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.

ಇವರು ಬೆಂಗಳೂರಿನಿಂದ ಆಗಮಿಸಿದ ನಂತರ ಮಂಗಳೂರು ತಾಲೂಕಿನ ಕುಟ್ಟಿಕಲ ನೀರುಮಾರ್ಗ ಮತ್ತು ನಡುಮನೆ ಕುಡುಪು ಗ್ರಾಮಗಳಲ್ಲಿ ಸಮನಾದ ದಿನಗಳ ಕಾಲ ವಾಸ್ತವ್ಯವಿರುವುದು ತಿಳಿದುಬಂದಿರುವ ಹಿನ್ನೆಲೆಯಲ್ಲಿ, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.

ವೆನ್ಲಾಕ್ ನಲ್ಲಿ 30 ರೋಗಿಗಳು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 30 ಕೋವಿಡ್ ರೋಗಿಗಳು ದಾಖಲಾಗಿದ್ದು, ಅವರ ಪೈಕಿ 27 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. 76 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ತೊಂದರೆ ಹಾಗೂ ಕಾಲಿನ ಸೋಂಕಿನಿಂದ ಬಳಲುತ್ತಿದ್ದಾರೆ. 68 ವರ್ಷದ ಮಹಿಳೆ ಹೃದಯಸಂಬಂಧಿ, ಶ್ವಾಸಕೋಶ ಹಾಗೂ ಮಧುಮೇಹದ ತೊಂದರೆಯಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ ಇದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. 40 ವರ್ಷದ ಮಹಿಳೆ, ಮಧುಮೇಹ, ಮೂತ್ರದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಮೂವರನ್ನೂ ಐಸಿಯುನಲ್ಲಿರಿಸಲಾಗಿದೆ. ಇವರಲ್ಲಿ ಇಂದು ಪಾಸಿಟಿವ್ ಬಂದ ರೋಗಿಯೂ ಸೇರಿದ್ದಾರೆ.

ಬಂಟ್ವಾಳದ ಬಾಲಕಿ ಸೇರಿ ಮೂವರು ಡಿಸ್ಚಾರ್ಜ್: ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳದ 16 ವರ್ಷದ ಬಾಲಕಿ ಸೇರಿದಂತೆ ಮೂವರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ. 62 ವರ್ಷದ ಬೋಳೂರು ನಿವಾಸಿ ಮತ್ತು 11 ವರ್ಷದ ಬೋಳೂರು ನಿವಾಸಿಯನ್ನೂ ಡಿಸ್ಚಾರ್ಜ್ ಮಾಡಲಾಗಿದೆ. ಇವರಲ್ಲಿ ಬಂಟ್ವಾಳದ 16 ವರ್ಷದ ಬಾಲಕಿ ಮೇ 6ರಂದು ವೆನ್ಲಾಕ್ ಗೆ ದಾಖಲಾಗಿದ್ದಳು. ಇವಳು ಏ.19ರಂದು ಮೃತಪಟ್ಟ ಮಹಿಳೆಯ ಪುತ್ರಿ.

ಬಂಟ್ವಾಳ ತಾಲೂಕಿನ ಕೇಸ್ ಗಳು: ಬಂಟ್ವಾಳ ತಾಲೂಕಿನಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕರೋಪಾಡಿಯ ವ್ಯಕ್ತಿ (ಮುಂಬೈನಿಂದ ಬಂದವರು ಸೇರಿದ್ದಾರೆ. ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ). 1 ಸಜೀಪನಡು (ಗುಣಮುಖ), 1 ತುಂಬೆ (ಗುಣಮುಖ), 1 ನರಿಕೊಂಬು ಗ್ರಾಮ (ಗುಣಮುಖ) 9 ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆ.(ಇವರಲ್ಲಿ 3 ಮೃತ, 3 ಗುಣಮುಖ ಮತ್ತು 3 ಚಿಕಿತ್ಸೆ).

ಬಂಟ್ವಾಳ ತಾಲೂಕಿನ ಒಟ್ಟು ಪ್ರಕರಣ 13. ಮೃತರು 3, ಗುಣಮುಖ 6, ಚಿಕಿತ್ಸೆ ಪಡೆಯುತ್ತಿರುವವರು 4(ಮುಂಬೈನಿಂದ ಬಂದವರು ಸೇರಿ)

ಬಂಟ್ವಾಳ ಪೇಟೆ ಕೇಸ್ ಗಳು: ಬಂಟ್ವಾಳ ಪೇಟೆಯಲ್ಲಿ ಒಟ್ಟು 9 ಪ್ರಕರಣಗಳು ಏಪ್ರಿಲ್ 19ರಿಂದ ದಾಖಲಾಗಿವೆ. ಇವುಗಳ ಪೈಕಿ 3 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 6 ಮಂದಿಯಲ್ಲಿ ಇಂದು ಡಿಸ್ಚಾರ್ಜ್ ಆದವರೂ ಸೇರಿ ಒಟ್ಟು 3 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಒಂದೇ ಮನೆಯ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಪೇಟೆ ಕೇಸ್ ಗಳು ಹೀಗಿವೆ. ಒಟ್ಟು ಪ್ರಕರಣ 9. ಮೃತಪಟ್ಟವರು 3. ಗುಣಮುಖರಾದವರು 3. ಚಿಕಿತ್ಸೆ ಪಡೆಯುತ್ತಿರುವವರು 3.

ಕರ್ನಾಟಕದ ಇಂದಿನ ಸ್ಥಿತಿ: ಕರ್ನಾಟಕದಲ್ಲಿ ಇಂದು 67 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ1462 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇಂದು ಸೋಂಕು ತಗಲಿದವರ ಸಂಖ್ಯೆ ಹೀಗಿದೆ. ಹಾಸನ 21, ಬೀದರ್ 10, ಮಂಡ್ಯ 8, ಕಲಬುರ್ಗಿ 7, ಉಡುಪಿ 6, ಬೆಂಗಳೂರು 4, ತುಮಕೂರು 4, ರಾಯಚೂರು 4, ಉತ್ತರಕನ್ನಡ 1, ಯಾದಗಿರಿ 1 ದಕ್ಷಿಣಕನ್ನಡ 1.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬೆಂಗಳೂರಿನಿಂದ ಬಂದ ಮಹಿಳೆಗೆ ಕೊರೊನಾ ಪಾಸಿಟಿವ್, ಬಂಟ್ವಾಳದ ಬಾಲಕಿ ಡಿಸ್ಚಾರ್ಜ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*