ಕರ್ನಾಟಕದಲ್ಲಿ ಮಂಗಳವಾರ ಒಟ್ಟು 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೀಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 811. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 543. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 40. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 1395 ಆಗಿದೆ. ಐಸಿಯುನಲ್ಲಿ 6 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಬಳ್ಳಾರಿಯ 61 ವರ್ಷದ ವ್ಯಕ್ತಿ, ವಿಜಯಪುರದ 65 ವರ್ಷದ ವ್ಯಕ್ತಿ ಮತ್ತು ಬೆಂಗಳೂರು ನಿವಾಸಿ 54 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮಂಡ್ಯ 71, ದಾವಣಗೆರೆ 22, ಶಿವಮೊಗ್ಗ 10, ಕಲಬುರ್ಗಿ 13, ಬೆಂಗಳೂರು 6, ಬಾಗಲಕೋಟೆ 5, ಉತ್ತರಕನ್ನಡ 4, ಉಡುಪಿ 4, ಹಾಸನ 3, ಚಿಕ್ಕಮಗಳೂರು 2, ಚಿತ್ರದುರ್ಗ 1, ವಿಜಯಪುರ 1, ಗದಗ 1,ಯಾದಗಿರಿ 1, ಬೀದರ್ 1, ರಾಯಚೂರು 1 ಇವತ್ತಿನ ಹೊಸ ಕೇಸ್ ಗಳು.
ಇವಿಷ್ಟು ಮಂಗಳವಾರದ ಸಮಗ್ರ ವರದಿ. ಆದರೆ ಕಳೆದ ಮೇ.14ರಿಂದ ಮೇ.19ರವರೆಗೆ ಕೊರೊನಾ ನಾಗಾಲೋಟದ ವಿವರ ಹೀಗಿದೆ ನೋಡಿ.
- ಮೇ.14ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 987. ಅಂದು 28 ಪ್ರಕರಣಗಳು ವರದಿಯಾಗಿತ್ತು.
- ಮೇ.15ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1056. ಅಂದು 69 ಪ್ರಕರಣಗಳು ವರದಿಯಾದವು.
- ಮೇ.16ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1092 ಅಂದು 36 ಪ್ರಕರಣಗಳು ವರದಿಯಾದವು.
- ಮೇ.17ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1147. ಅಂದು 55 ಹೊಸ ಪ್ರಕರಣಗಳು ವರದಿಯಾದವು.
- ಮೇ.18ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1246. ಅಂದು 99 ಹೊಸ ಪ್ರಕರಣಗಳು ವರದಿಯಾದವು.
- ಮೇ.19ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1395. ಇಂದು 149 ಹೊಸ ಪ್ರಕರಣಗಳು ವರದಿಯಾಗಿವೆ.
ಅಂದರೆ, ಮೇ. 14ರಂದು 28, 15ರಂದು 69 ಪ್ರಕರಣಗಳು ವರದಿಯಾದರೆ, 16ರಂದು 36 ಪ್ರಕರಣಗಳು ಪತ್ತೆಯಾಗಿದ್ದವು. 17ರಂದು 99 ಮತ್ತು 19ರಂದು 149 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕೇವಲ 6 ದಿನಗಳಲ್ಲಿ 398 ಪ್ರಕರಣಗಳು ಪತ್ತೆಯಾದಂತಾಗಿದೆ. ಕರ್ನಾಟಕದಲ್ಲಿ ಮೊದಲ ಪ್ರಕರಣದಿಂದ 1000ನೇ ಪ್ರಕರಣಗಳವರೆಗೆ ದಾಖಲಾಗಲು ಸುಮಾರು 70 ದಿನಗಳು ಬೇಕಾದರೆ, ಆರು ದಿನಗಳಲ್ಲೇ 398 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸರಾಸರಿ ದಿನಕ್ಕೆ ಕಳೆದ 6 ದಿನಗಳಿಂದ 66 ಪ್ರಕರಣಗಳು ದಾಖಲಾದಂತಾಗಿದೆ. ಅದರಲ್ಲೂ ಕಳೆದ ಮೂರು ದಿನಗಳಿಂದ 303 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸರಾಸರಿ 101 ಪ್ರಕರಣಗಳು ದಿನವಹಿ ದೊರೆತಂತಾಗಿದೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಹೊರರಾಜ್ಯಗಳಿಂದ ಬಂದವರಲ್ಲಿ ಕಂಡುಬಂದಿರುವುದು ಎಂಬುದು ಇನ್ನೊಂದು ಮುಖ್ಯ ವಿಚಾರ.
ಇದುವರೆಗೆ ಲಾಕ್ ಡೌನ್ ಅನ್ನು ಶ್ರದ್ಧೆಯಿಂದ ಪಾಲಿಸಿದವರು ಹೊರ ಹೊರಟಾಗ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರು ಸಂಪರ್ಕಿಸಿದರೆ ಅಷ್ಟೂ ದಿನಗಳ ಪಾಲನೆ ನೀರಲ್ಲಿ ಮಾಡಿದ ಹೋಮದಂತಾದೀತು. ಎಲ್ಲಿ, ಯಾವಾಗ, ಯಾವ ಹೊತ್ತಲ್ಲಿ ಹೊಂಚು ಹಾಕಿ ಕುಳಿತಿರುತ್ತದೆ ಎಂದರಿಯದ ಕೊರೊನಾ ವೈರಸ್ ಕುರಿತು ಎಚ್ಚರ ವಹಿಸಬೇಕೆಂದಿದ್ದರೆ, ನಿಯಮ ಪಾಲನೆ ಅತ್ಯಗತ್ಯ.
Be the first to comment on "CORONA ALERT: ಮೂರು ದಿನಗಳಲ್ಲಿ 303 ಹೊಸ ಪ್ರಕರಣ, ಕರ್ನಾಟಕ ಆಗದಿರಲಿ ಕೊರೊನಾ ನಿಲ್ದಾಣ"