ಜಾರ್ಖಂಡ್ ವಲಸೆ ಕಾರ್ಮಿಕರಿಗೆ ಬಂಟ್ವಾಳದಿಂದ ಶುಭವಿದಾಯ

ವಿಡಿಯೋ, ಚಿತ್ರಗಳು ಮತ್ತು ವಿವರಗಳಿಗೆ ಕ್ಲಿಕ್ ಮಾಡಿರಿ

ಜಾಹೀರಾತು

ಕೆ.ಎಸ್.ಆರ್.ಟಿ.ಸಿ.ಯ 18 ಬಸ್ಸುಗಳಲ್ಲಿ ಜಾರ್ಖಂಡ್ ರಾಜ್ಯದ ಒಟ್ಟು 897 ವಲಸೆ ಕಾರ್ಮಿಕರು ಮಂಗಳೂರಿನಲ್ಲಿ ರೈಲನ್ನೇರಲು ಬಂಟ್ವಾಳ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟ್ವಾಳ ಬಂಟರ ಭವನದಿಂದ ಶುಕ್ರವಾರ ಸಂಜೆ ಹೊರಟರು.

ಎರಡು ದಿನಗಳಿಂದ ಇವರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ತಾಲೂಕು ಆಡಳಿತದ ನಾನಾ ಇಲಾಖೆಗಳ ತಂಡ ಬೀಳ್ಕೊಡುವ ಸಂದರ್ಭ ಕಾರ್ಮಿಕರು ಉತ್ಸಾಹ ಹಾಗೂ ಸಮಾಧಾನದಿಂದ ಕೈಬೀಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಡಿವೈಎಸ್ಪಿ ವೆಲಂಟೈನ್ ಡಿಸೋಜ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ನೇತೃತ್ವದಲ್ಲಿ ಬಂಟ್ವಾಳ ಶಾಸಕರ ಸಹಾಯವಾಣಿ ತಂಡದ ಸದಸ್ಯರು ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನಿಂದ ಆಗಮಿಸಿದ ಕಾರ್ಮಿಕರ ಮನವೊಲಿಸಿ ಬಂಟ್ವಾಳದಲ್ಲಿ ಎರಡು ದಿನಗಳ ಕಾಲ ಬಂಟರ ಭವನದಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಉಳಿಸಿಕೊಂಡಿದ್ದರು.

ಈ ಸಂದರ್ಭ ಊರಿಗೆ ಹೋಗುತ್ತೇವೆ ಎಂದು ಹಠ ಹಿಡಿದಿದ್ದ ಕಾರ್ಮಿಕರನ್ನು ಮಧ್ಯರಾತ್ರಿ ಆಗಮಿಸಿದ್ದ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎಸ್. ಐ. ಪ್ರಸನ್ನ ಮನವೊಲಿಸಿದ್ದರು. ಬಳಿಕ ಎರಡು ದಿನಗಳಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಸಹಿತ ಅಗತ್ಯ ದಾಖಲೆಗಳ ಕ್ರೋಢೀಕರಣವಾದ ನಂತರ ಶುಕ್ರವಾರ ರಾತ್ರಿ ರೈಲಿಗೆ ಕಳುಹಿಸುವ ಏರ್ಪಾಡು ಮಾಡಲಾಯಿತು. ಅದರಂತೆ ಶುಕ್ರವಾರ ಕೆ.ಎಸ್.ಆರ್.ಟಿ.ಸಿ.ಯ 18 ಬಸ್ಸುಗಳಲ್ಲಿ ಅವರನ್ನು ಕಳುಹಿಸಲಾಯಿತು.

ತಹಸೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲಂಟೈನ್ ಡಿಸೋಜ, ಕೆ.ಎಸ್.ಆರ್.ಟಿ.ಸಿ. ವಿಭಾಗ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ, ಘಟಕಾಧಿಕಾರಿ ಶ್ರೀಶ ಭಟ್, ಕೆಎಸ್ಸಾರ್ಟಿಸಿ ಟ್ರಾಫಿಕ್ ಇನ್ಸ್ ಪೆಕ್ಟರ್ ಗಣೇಶ ಪೈ, ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ಎಸ್ಸ್ಐ ಪ್ರಸನ್ನ, ಕಂದಾಯ ಇಲಾಖೆಯ ಆರ್. ಐಗಳಾದ ರಾಮ ಕಾಟಿಪಳ್ಳ, ದಿವಾಕರ್ ಮುಗುಳ್ಯ, ನವೀನ್ ಬೆಂಜನಪದವು, ಶಿರಸ್ತೇದಾರ್ ಶ್ರೀಧರ್, ರಾಜೇಶ್ ನಾಯ್ಕ್ ಮುಖಂಡರಾದ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕೆ.ಹರಿಕೃಷ್ಣ ಬಂಟ್ವಾಳ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಹಾಯವಾಣಿ ತಂಡದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ರಾಜೇಶ್ ನಾಯ್ಕ್ ಮುತುವರ್ಜಿಯಲ್ಲಿ ನಾನಾ ಇಲಾಖೆಗಳ ಸಿಬ್ಬಂದಿ, ಸಹಾಯವಾಣಿ ತಂಡದ ಸದಸ್ಯರು ಊಟೋಪಚಾರ ಹಾಗೂ ಇತರ ವ್ಯವಸ್ಥೆಗಳನ್ನು ಒದಗಿಸುವುದರಲ್ಲಿ ಶ್ರಮಿಸಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಜಾರ್ಖಂಡ್ ವಲಸೆ ಕಾರ್ಮಿಕರಿಗೆ ಬಂಟ್ವಾಳದಿಂದ ಶುಭವಿದಾಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*