ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಮಂದಿಯಲ್ಲಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯ ನಿವಾಸಿ. ಸೋಂಕು ದೃಢಪಟ್ಟ ಸುರತ್ಕಲ್‍ನ ನಿವಾಸಿ ಸೇರಿದಂತೆ ಎಲ್ಲರನ್ನೂ ನಗರದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಸೋಂಕಿತ 15 ಮಂದಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಗೊಂಡಿದೆ. 45ರ ಹರೆಯದ ಪತಿ 33ರ ಹರೆಯದ ಪತ್ನಿ ಹಾಗೂ 6 ವರ್ಷದ ಬಾಲೆಗೂ ಸೋಂಕು ತಗಲಿದೆ. ಸೋಂಕಿತರಲ್ಲಿ 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 12ರಂದು ಆಗಮಿಸಿದ ವಿಮಾನದಲ್ಲಿ 179 ಮಂದಿ ಪ್ರಯಾಣಿಕರಲ್ಲಿ 125 ಮಂದಿ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್‍ಗೊಳಗಾಗಿದ್ದು, ಉಡುಪಿಯ 49 ಮಂದಿ ಅಲ್ಲಿಗೆ ತೆರಳಿ ಕ್ವಾರಂಟೈನ್‍ಗೊಳಪಟ್ಟಿದ್ದಾರೆ. ಇದೇ ವೇಳೆ ಉತ್ತರ ಕನ್ನಡದ 5 ಮಂದಿ ಆ ಜಿಲ್ಲೆಗೆ ತೆರಳಿ ಕ್ವಾರಂಟೈನ್‍ಗೊಳಪಟ್ಟಿದ್ದಾರೆ ಎಲ್ಲ ಹೋಟೆಲ್ ಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಕ್ವಾರಂಟೈನ್ ಯಾರೂ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಥಮ ವಿಮಾನದಲ್ಲಿ ಬಂದವರಲ್ಲಿ ಬಹುತೇಕರು ವೈದ್ಯಕೀಯ ಅಗತ್ಯಗಳಿದ್ದವರು, ಗರ್ಭಿಣಿಯರಿದ್ದರು. ಸೋಂಕಿತರಲ್ಲಿ ಗರ್ಭಿಣಿಯರು ಸೇರಿಲ್ಲ ಎಂದರು. ಕೋವಿಡ್ ನೋಡಲ್ ಅಧಿಕಾರಿ ಗಾಯತ್ರಿ ನಾಯಕ್, ಡಿಎಚ್ ಒ ರಾಮಚಂದ್ರ ಬಾಯರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
For More news Join BANTWALNEWS Watsapp Group
https://chat.whatsapp.com/GX45mPIvBYmC0f8LI6Ytsf
Be the first to comment on "ದುಬೈನಿಂದ ಬಂದವರಲ್ಲಿ ಪತ್ತೆಯಾಯಿತು ಕೊರೊನಾ ಸೋಂಕು, ಕ್ವಾರಂಟೈನ್ ಕಟ್ಟುನಿಟ್ಟು"