ಇಡೀ ದೇಶವೇ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನರು ಊದ್ಯೋಗವಕಾಶಗಳಿಲ್ಲಿದೇ ಕಂಗಾಲಾಗಿ ಹೋಗಿದ್ದಾರೆ . ಇಂತಹ ಸಂದರ್ಭದಲ್ಲಿ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಪೋಷಕರ ಬಳಿ ಬಾಕಿಯಿರುವ ಕಾಲೇಜು ಶುಲ್ಕವನ್ನು ಮರುಪಾವತಿ ಮಾಡಲು ಒತ್ತಾಯಿಸುತ್ತಿದೆ ಎಂದಿರುವ ಎಬಿವಿಪಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ಸಂಘಟನೆ ವತಿಯಿಂದ ಮನವಿಯನ್ನು ನೀಡಲಾಯಿತು.
ಕೆಲವು ಹಾಸ್ಟೆಲ್ ಗಳಲ್ಲಿ ಹೊರಜಿಲ್ಲೆಗಳಿಂದ ಬಂದತಹ ಜನರನ್ನು ಕ್ವಾರಂಟ್ವೆನ್ ಮಾಡುತ್ತಿರುವುದರಿಂದ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಕಾಲೇಜು ಶುಲ್ಕ ಮರುಪಾವತಿ ಮಾಡುವ ದಿನಾಂಕಗಳನ್ನು ವಿಸ್ತರಿಸುವ ಮೂಲಕ ವಿದ್ಯಾರ್ಥಿ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿ ಮನವಿಯನ್ನು ನೀಡಲಾಯಿತು . ಈ ಸಂದರ್ಭ ಅಭಾವಿಪ ಮಂಗಳೂರು ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು ಹಾಗೂ ಹರ್ಷಿತ್ ಕೊಯಿಲ, ದಿನೇಶ್ ಕೊಯಿಲ, ಅಖಿಲಾಷ್ , ನಾಗರಾಜ್ ಬಂಟ್ವಾಳದ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment on "ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ: ಎಬಿವಿಪಿ ಮನವಿ"