ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
ವಿಧಾನಮಂಡಲ ಅಧಿವೇಶನದಲ್ಲಿ ಜನಪ್ರತಿನಿಧಿಗಳ ಸಮ್ಮುಖ ವಿಷಯ ಮಂಡಿಸದೆ ತರಾತುರಿಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ನಡೆಸುವ ವಿಚಾರ ಕೇಳಿಬರುತ್ತಿದ್ದು, ಇದರ ಹಿನ್ನೆಲೆ ಏನು ಎಂದು ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ತರುವ ಉದ್ದೇಶ ಅಡಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. ಇದು ಏಕಸ್ವಾಮ್ಯಕ್ಕೆ ದಾರಿ ಮಾಡುತ್ತದೆ. ತರಾತುರಿಯಲ್ಲಿ ತಿದ್ದುಪಡಿ ಮಾಡುವುದು ತಪ್ಪು. ಯಾವ ರೈತರ ಅಭಿಪ್ರಾಯವನ್ನೂ ಕೇಳದೆ, ಜನಪ್ರತಿನಿಧಿಗಳನ್ನು ಒಂದು ಮಾತೂ ಕೇಳದೆ ಈ ರೀತಿ ಮಾಡುವುದು ಸರಿಯಲ್ಲ. ಜಿಲ್ಲೆಯ ರೈತರೊಂದಿಗೆ ಸೇರಿ ಈ ರೀತಿ ರೈತರ ಹಕ್ಕನ್ನು ಮೊಟಕುಗೊಳಿಸುವ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ಸಿದ್ಧ ಎಂದವರು ಪ್ರಕಟಿಸಿದ್ದಾರೆ.
Be the first to comment on "ತರಾತುರಿಯಲ್ಲಿ ಎಪಿಎಂಪಿ ಕಾಯ್ದೆ ತಿದ್ದುಪಡಿ ಯಾಕೆ? – ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ"