You can view more news by joining this watsapp group
https://chat.whatsapp.com/GX45mPIvBYmC0f8LI6Ytsf
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಮಧ್ಯಾಹ್ನ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 8 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ಒಟ್ಟು 701 ಖಚಿತ ಪ್ರಕರಣಗಳು ಪತ್ತೆಯಾದಂತಾಗಿದೆ. ಇವುಗಳ ಪೈಕಿ 30 ಮಂದಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ 3 ದಕ್ಷಿಣ ಕನ್ನಡ ಜಿಲ್ಲೆಯವರು.
363 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ದಾವಣಗೆರೆಯ 4, ಕಲಬುರಗಿಯ 3, ಬೆಳಗಾವಿಯ 1, ಬೆಂಗಳೂರು ನಗರದ 1 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳ ಪೈಕಿ ದಾವಣಗೆರೆಯ 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ವರದಿಯಾಗಿವೆ. ಹೊರರಾಜ್ಯ/ಜಿಲ್ಲೆಯದ್ದು ದ.ಕ.ದಲ್ಲಿ ವರದಿಯಾದದ್ದನ್ನು ಸೇರಿಸಿದರೆ ಒಟ್ಟು 28 ಆಗುತ್ತದೆ. ಇವುಗಳ ಪೈಕಿ 3 ಮಂದಿ ಮೃತಪಟ್ಟಿದ್ದಾರೆ. 13 ಮಂದಿ ಗುಣಮುಖರಾಗಿದ್ದಾರೆ.
Be the first to comment on "ಕೊರೊನಾ: ರಾಜ್ಯದಲ್ಲೀಗ 701 ಕೇಸ್, ಗುಣಮುಖರೆಷ್ಟು, ಮೃತಪಟ್ಟವರೆಷ್ಟು? ಇಲ್ಲಿದೆ ವಿವರ"