ಬೋಳೂರಿನ ನಿವಾಸಿಗಳಾದ 38 ವರ್ಷದ ಮಹಿಳೆ, 11 ವಯಸ್ಸಿನ ಬಾಲಕಿ ಹಾಗೂ ಬಂಟ್ವಾಳ ಕಸ್ಬಾ ಗ್ರಾಮದ 16 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವೆನ್ಲಾಕ್ ಆಸ್ಪತ್ರೆ ವರದಿಯಂತೆ ಒಟ್ಟು 12 ಕೋವಿಡ್ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 8 ರೋಗಿಗಳ ಸ್ಥಿತಿ ತೃಪ್ತಿಕರವಾಗಿರುತ್ತದೆ. 80 ವರ್ಷದ ಕುಲಶೇಖರ ನಿವಾಸಿ, 58 ವರ್ಷದ ಬೋಳೂರು ನಿವಾಸಿ ಆರೋಗ್ಯ ಸ್ಥಿತಿ ನಾಜೂಕಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು ವಿವರ ಹೀಗಿದೆ.
- ಇದುವರೆಗೆ ಕಳುಹಿಸಲಾದ ಗಂಟಲು ದ್ರವ ಮಾದರಿಗಳು ಒಟ್ಟು: 3916
- ವರದಿ ಬಂದದ್ದು: 3699. ಇವುಗಳ ಪೈಕಿ 3671 ನೆಗೆಟಿವ್. 28 ಪಾಸಿಟಿವ್. ಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಆದ ರೋಗಿಗಳ ಸಂಖ್ಯೆ 13. ಚಿಕಿತ್ಸೆ ಪಡೆಯುತ್ತಿರುವವರು 12. ಮೃತಪಟ್ಟವರು 3.
- ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಪಾಸಿಟಿವ್ ಕೇಸುಗಳ ಸಂಖ್ಯೆ: 22
- ಹೊರಜಿಲ್ಲೆ/ರಾಜ್ಯದ ಕೋವಿಡ್ ಕೇಸುಗಳು ದ.ಕ.ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದದ್ದು : 6
- ಇಂದು ಕಳುಹಿಸಲಾದ ಸ್ಯಾಂಪಲ್ ಗಳು: 137
- ನಿಗಾದಲ್ಲಿ ಇರುವವರು: 27
- ಫಲಿತಾಂಶಕ್ಕೆ ಬಾಕಿ: 217
Be the first to comment on "ದಕ್ಷಿಣ ಕನ್ನಡ: ಇನ್ನೂ 217 ಫಲಿತಾಂಶ ಬಾಕಿ, ಇಂದು 3 ಪಾಸಿಟಿವ್"