ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ ಪೇಟೆಯ ಕೆಲ ಭಾಗ, ಮೇಲ್ಕಾರ್, ವಿಟ್ಲ ಸಹಿತ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಬೆಳಗ್ಗಿನಿಂದಲೇ ಜನಸಂಚಾರ ಕಂಡುಬಂತು. ಕೆಲವು ಅಂಗಡಿ ಮಳಿಗೆಗಳು ತೆರೆದ ಕಾರಣ ದ್ವಿಚಕ್ರ ಹಾಗೂ ಸ್ವಂತ ವಾಹನಗಳಲ್ಲಿ ಆಗಮಿಸುವವರು, ಆಟೊರಿಕ್ಷಾ, ಟ್ಯಾಕ್ಸಿಗಳಲ್ಲಿ ಬರುವವರ ಸಂಖ್ಯೆ ಜಾಸ್ತಿ ಆಗಿತ್ತು. ಸಂಚಾರ ಅವಧಿ ಬೆಳಗ್ಗೆ 7ರಿಂದ ಸಂಜೆಯವರೆಗೂ ಇದ್ದ ಕಾರಣ, ಕಳೆದ ಒಂದೂವರೆ ತಿಂಗಳಲ್ಲಿ ಮನೆಯೊಳಗಿದ್ದವರಲ್ಲಿ ಹೆಚ್ಚಿನವರು ರಸ್ತೆಯ ಬಳಿ ಬರುತ್ತಿರುವುದು ಕಂಡುಬಂತು. ಆಟೊ ಸ್ಟ್ಯಾಂಡ್ ಗಳಲ್ಲಿ ಎಂದಿನಂತೆ ರಿಕ್ಷಾಗಳ ನಿಲುಗಡೆ ಇದ್ದರೆ, ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಟೂರಿಸ್ಟ್ ಟ್ಯಾಕ್ಸಿಗಳು ಬಾಡಿಗೆಗಾಗಿ ಗ್ರಾಹಕರನ್ನು ಕಾಯುತ್ತಿದ್ದವು. ಬ್ಯಾಂಕು ಸಹಿತ ಅಂಗಡಿ ಮಳಿಗೆಗಳಲ್ಲಿ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಮದ್ಯದಂಗಡಿಗಳ ಕಡೆಗೂ ಜನರು ಹೆಜ್ಜೆ ಹಾಕುತ್ತಿರುವುದು ಸೋಮವಾರ ಕಂಡುಬಂತು.
Be the first to comment on "ಲಾಕ್ ಡೌನ್ ಸಡಿಲಿಕೆ: ರಸ್ತೆಗಿಳಿದ ಜನರು, ವಾಹನಗಳು, ತೆರೆದ ವ್ಯಾಪಾರಿ ಮಳಿಗೆಗಳು"